ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ 'ಸಿಎಂ ಅಭ್ಯರ್ಥಿ' : ಡಿ.ಕೆ ಸುರೇಶ್ ಘೋಷಣೆ
ಹಾಸನ : ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ 'ಸಿಎಂ ಅಭ್ಯರ್ಥಿ' ಎಂದು ಡಿ.ಕೆ ಸುರೇಶ್ ( D.K Suresh ) ಘೋಷಣೆ ಮಾಡಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆ ಸುರೇಶ್ ತಾಕತ್ ಇದ್ದರೆ ಕಾಂಗ್ರೆಸ್ ನವರು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿ ಎಂದು ಬಿಜೆಪಿ ನಾಯಕರು ಸವಾಲ್ ಹಾಕಿದ್ದರು.
ಮೋದಿ ಆರೋಗ್ಯ ಚೆನ್ನಾಗಿರಲಿ, ಆದ್ರೆ ಅವ್ರು ಸುಳ್ಳು ಹೇಳುವುದನ್ನ ಬಿಡಲಿ - ಮಾಜಿ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಮೋದಿ ಆರೋಗ್ಯ ಚೆನ್ನಾಗಿರಲಿ, ಆದ್ರೆ ಅವ್ರು ಸುಳ್ಳು ಹೇಳುವುದನ್ನ ಬಿಡಲಿ ಅಂಥ ಮಾಜಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು : ಮೋದಿ ಜನರ ಕೆಲಸ ಮಾಡಿಲ್ಲ. ಅವರು ಬರೀ ಸುಳ್ಳು ಹೇಳುತ್ತಾರೆ. ನೀಡಿದ ಭರವಸೆ ಈಡೇರಿಸಿಲ್ಲ ಅಂತಾ ನಾವು ಹೇಳಿದ್ದೇವೆ. ಧಾನಿ ಮೋದಿಯವರು ಪಾಪ ಇನ್ನೂ ಬದುಕಿರಲಿ, ಅವರ ಆರೋಗ್ಯ ಚೆನ್ನಾಗಿರಲಿ ಅಂತ ತಿಳಿಸಿದರು. ಇದೇ ವೇಳೆ ಅವರು ನನಗೆ ಸಿದ್ದರಾಮಯ್ಯರನ್ನ ಮುಗಿಸಿ ಬಿಡಿ ಅಂತ ಅಶ್ವಥ್ ನಾರಾಯಣ್ ಹೇಳಿದ್ದರು. ಆ ತರಹ ಯಾರಾದರೂ ಹೇಳಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮೋದಿಯವರು ಪಾಪ ಬದುಕಿರಲಿ, ದೇಶದ ಪ್ರಧಾನಮಂತ್ರಿಗಳು ಆರೋಗ್ಯವಾಗಿರಲಿ ಎಂದು ತಿಳಿಸಿದರು.