ಚೆಕ್ ಬೌನ್ಸ್ ಕೇಸ್ ನಲ್ಲಿ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಷರತ್ತುಬದ್ಧ ರಿಲೀಫ್

ಚೆಕ್ ಬೌನ್ಸ್ ಕೇಸ್ ನಲ್ಲಿ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಷರತ್ತುಬದ್ಧ ರಿಲೀಫ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದಂತ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ, ಅವರ ವಿರುದ್ಧದದ ಕೇಸ್ ಗೆ ಷರತ್ತು ಬದ್ಧ ರಿಲೀಫ್ ನೀಡಿದೆ.

ಹೂವಪ್ಪಗೌಡ ಎಂಬುವರು ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಒಟ್ಟು 8 ಚೆಕ್ ನ 1.38 ಕೋಟಿ ಬೌನ್ಸ್ ಪ್ರಕರಣದಲ್ಲಿ ದಾಖಲಿಸಿದ್ದರು.

ಈ ಸಂಬಂಧದ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು 1.38 ಕೋಟಿ ಪಾವತಿಸಿ, ಇಲ್ಲವೇ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಚಿಕ್ಕಮಗಳೂರಿನ ಎಸ್ಪಿ ಮೂಲಕ ಬಂಧನ ರಹಿತ ವಾರೆಂಟ್ ಜಾರಿಗೊಳಿಸಿತ್ತು.

ಈ ಪ್ರಕರಣ ಸಂಬಂಧ ಶಾಸಕ ಎಂ.ಪಿ ಕುಮಾರಸ್ವಾಮಿ, ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಸೆಷನ್ಸ್ ಕೋರ್ಟ್ ಅವರ ವಿರುದ್ಧದ ಶಿಕ್ಷೆ ಅಮಾನತ್ತಿನಲ್ಲಿಟ್ಟು, ಚೆಕ್ ಬೌನ್ಸ್ ಕೇಸ್ ತೀರ್ಪಿನ ಮೊತ್ತದಲ್ಲಿ ಶೇ.20ರಷ್ಟು ಠೇವಣಿಯನ್ನು 60 ದಿನಗಳಲ್ಲಿ ಇಡಲು ಸೂಚಿಸಿದೆ. ಅಲ್ಲದೇ ವಿಚಾರಣಾ ನ್ಯಾಯಾಲಯದಲ್ಲಿ 50 ಸಾವಿರ ಬಾಂಡ್, ಶೂರಿಟಿ ನೀಡಲು ಆದೇಶಿಸಿದೆ. ಈ ಮೂಲಕ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಬಂಧನದ ಭೀತಿಯಿಂದ ತಾತ್ಕಾಲಿಕವಾಗಿ ಬಿಗ್ ರಿಲೀಫ್ ನೀಡಿದೆ.