ಈ ಬಾರಿಸಿದ್ದರಾಮಯ್ಯಸೋಲಿನ ಜೊತೆ ರಾಜಕೀಯ ಭವಿಷ್ಯ ಅಂತ್ಯ MLC ಛಲವಾದಿ ನಾರಾಯಣಸ್ವಾಮಿಭವಿಷ್ಯ

ಬೆಂಗಳೂರು: ಕಾಂಗ್ರೆಸ್ಸಿನ ನಾಯಕ ಸಿದ್ದರಾಮಯ್ಯರವರು ( Congress Leader Siddaramaiah ) ಎರಡೂ ಕಡೆ ಸೋಲಲಿದ್ದು, ಅವರ ರಾಜಕೀಯ ಭವಿಷ್ಯವೂ ಅಂತ್ಯ ಕಾಣಲಿದೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ( MLC Chalavadi Narayanaswamy ) ಅವರು ತಿಳಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಶಕ್ತ ನಾಯಕ. ಅದಕ್ಕಾಗಿಯೇ ಅವರು ಎಲ್ಲಾದರೂ ಒಂದು ಕಡೆ ಗೆಲ್ಲಬೇಕೆಂದು 2 ಕಡೆ ಸ್ಪರ್ಧೆಗೆ ಇಳಿಯುತ್ತಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು.

ನಿಮ್ಮ ಕಾಲದಲ್ಲಿ ಅನೇಕ ಲೂಟಿ ಮಾಡಿದ್ದೀರಿ. ಅದಕ್ಕಾಗಿಯೇ ಜನರು ನಿಮ್ಮನ್ನು ಸೋಲಿಸಿದರು. 122 ಸೀಟು ಇದ್ದುದು 80ಕ್ಕೆ ಯಾಕೆ ಇಳಿಯಿತು? ನಿಮ್ಮ ಆಡಳಿತದಿಂದ ಜನರಿಗೆ ತೃಪ್ತಿ ಆಗಿದ್ದರೆ ನೀವು ಬಹುಮತ ಪಡೆಯಬೇಕಿತ್ತಲ್ಲವೇ? ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಗೆ ಓಡಿಹೋಗಿ ಕಡಿಮೆ ಅಂತರದಲ್ಲಿ ಸಿದ್ದರಾಮಯ್ಯ ಗೆದ್ದರು. ಇಲ್ಲದಿದ್ದರೆ ಅಂದೇ ಅವರ ರಾಜಕೀಯ ಸಮಾಪ್ತಿ ಆಗುತ್ತಿತ್ತು ಎಂದು ವಿಶ್ಲೇಷಿಸಿದರು. ಹಿಂದೆಯೂ ಅತ್ಯಂತ ಕಡಿಮೆ ಮತದಿಂದ (257 ಮತ) ಅವರು ಚಾಮುಂಡೇಶ್ವರಿಯಲ್ಲಿ ಗೆದ್ದಿದ್ದರು ಎಂದು ನುಡಿದರು.

ಇವತ್ತು ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ. ಚಾಮುಂಡೇಶ್ವರಿ, ಬಾದಾಮಿ, ಕೋಲಾರ- ಹೀಗೆ ಕ್ಷೇತ್ರ ಹುಡುಕಿ ಈಗ ಮತ್ತೆ ವರುಣಾಕ್ಕೆ ಮರಳಿದ್ದಾರೆ. ಎಲ್ಲರೂ ಅಪಹಾಸ್ಯ ಮಾಡುತ್ತಿರುವ ಕಾರಣ ಅಲ್ಲಿ- ಇಲ್ಲಿ ನಿಲ್ಲುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯರ ಸುತ್ತ ಇರುವವರು ಟಿವಿ ಸಂಸ್ಥೆಯೊಂದು ಮಾಡಿದ ಸ್ಟಿಂಗ್ ಆಪರೇಷನ್‍ನಲ್ಲಿ ಲಂಚದ ಹಣ ಪಡೆಯುವುದು ಹೊರಬಿದ್ದಿದೆ. ಭ್ರಷ್ಟಾಚಾರದಲ್ಲಿ ಸಿಲುಕಿದವರು ಯಾರೆಂದು ಸಿದ್ದರಾಮಯ್ಯರವರು ಹೇಳಬೇಕು ಎಂದು ಆಗ್ರಹಿಸಿದರು.

ಸುಮಾರು 60 ಶಾಸಕರು, ನಿಮ್ಮ ಸುತ್ತಮುತ್ತ ಇರುವವರೇ ಇದರಲ್ಲಿ ಸೇರಿದ್ದಾರಲ್ಲ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ನಿಮ್ಮ ಭಾಷಣ ಬೇಕಿಲ್ಲ. ಇದರ ಕುರಿತು ತನಿಖೆ ನಡೆಸಿ ಜನರಿಗೆ ಉತ್ತರ ಕೊಡಿ ಎಂದು ಸವಾಲು ಹಾಕಿದರು. ಮೈಸೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಮತ್ತು ಇತರರು ಇದ್ದರು.

.