ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಅದ್ದೂರಿ ಸ್ವಾಗತ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಗುರುವಾರ ಅದ್ದೂರಿ ಸ್ವಾಗತ ನೀಡಲಾಯಿತು.
ಸಾಂಪ್ರದಾಯಿಕವಾಗಿ ಎತ್ತಿನಗಾಡಿ ಮೆರವಣಿಗೆಯಲ್ಲಿ ಅವರನ್ನು ಸಮಾರಂಭಕ್ಕೆ ಕರೆದೊಯ್ಯಲಾಯಿತು.
ಸಿ.ಟಿ.ರವಿ ಅವರು ನಗರದ ಎಂ.ಜಿ.ರಸ್ತೆಯಿಂದ ಡಿಸಿ ಕಚೇರಿವರೆಗೂ ಎತ್ತಿನ ಗಾಡಿ ಓಡಿಸದರೆ, ಜಿಲ್ಲಾಧಿಕಾರಿ, ಸಿಇಓ, ಎಸ್ಪಿ, ಅಣ್ಣಾಮಲೈ, ಎಲ್ಲರೂ ಬಂಡಿಗಳಲ್ಲಿ ತೆರಳಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಚಿಕ್ಕಮಗಳೂರು ಜಿಲ್ಲಾ ಉತ್ಸವ ಸೇರಿ ಎರಡು ಕಾರ್ಯಕ್ರಮದಲ್ಲಿ ಅಣ್ಣಾಮಲೈ ಅವರು ಭಾಗಿಯಾಗಿ ಮಧ್ಯಾಹ್ನದ ನಂತರ ತಮಿಳುನಾಡಿಗೆ ವಾಪಸ್ಸಾಗಲಿದ್ದಾರೆ. ಈ ಹಿಂದೆ ಜಿಲ್ಲಾ ಎಸ್ ಪಿ ಆಗಿದ್ದ ಅಣ್ಣಾಮಲೈ ಅವರನ್ನ ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಂಡರು.
ತೇಜಸ್ವಿ ಸೂರ್ಯ ನಡೆ ಸಮರ್ಥನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದ ಬಾಗಿಲು ತೆಗೆದ ವಿಚಾರವನ್ನು ಸಮರ್ಥಿಸಿಕೊಂಡ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ. ಅದನ್ನ ರೊಟೇಟ್ ಮಾಡಿ ತೆರೆಯಬೇಕು. ಸಂಸದರಾದ ಅವರು ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅವರು ಬಾಗಿಲು ತೆರೆದಿಲ್ಲ. ಅವರು ಕೂತಿದ್ದು ತುರ್ತು ನಿರ್ಗಮನ ಸೀಟಿನಲ್ಲಿ, ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರುವುದಿಲ್ಲ. ಅಲ್ಲಿ ಎಕ್ಸಿಟ್ ಡೋರ್ ನಲ್ಲಿ ಬ್ಲಿಡಿಂಗ್ ಸ್ವಲ್ಪ ಓಪನ್ ಇತ್ತು, ಅದನ್ನ ಏರ್ ಹಾಸ್ಟೆಸ್ ಗಮನ ತಂದರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದರು, ಅಲ್ಲಿ ತೇಜಸ್ವಿ ಇನ್ಸ್ ಟೆಂಟ್ ರಿಪೋರ್ಟ್ ಕೊಟ್ಟರು. ತೇಜಸ್ವಿ ಸೂರ್ಯ ಡೋರ್ ಪೂರ್ಣ ತೆರೆದಿಲ್ಲ. ತೇಜಸ್ವಿ ಸೂರ್ಯ ಇತರ ಪ್ರಯಾಣಿಕರಲ್ಲಿ ಕ್ಷಮೆ ಕೋರಿದ್ದಾರೆ. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ತ್ವರಿತ ವರದಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‍ಗೆ ಮಾತನಾಡಲು ಬೇರೆ ವಿಷಯ ಇಲ್ಲ ಅದಕ್ಕಾಗಿ ಇಂತಹ ವಿಷಯವನ್ನ ಮಾತನಾಡುತ್ತಿದ್ದಾರೆ ಎಂದರು.