ಕೋವಿಡ್ ಇಳಿಕೆ: ತಾಜ್ ಮಹಲ್ ಸ್ಮಾರಕ ಭೇಟಿಗೆ ಪ್ರವಾಸಿಗರಿಗೆ ಅವಕಾಶ
ಆಗ್ರಾ, ಜೂ.16: ಕೊರೊನಾ ಸೋಂಕು ಪ್ರಕರಣಗಳು ಕೊಂಚ ಇಳಿಕೆ ಕಾಣುತ್ತಿರುವ ಮಧ್ಯೆ ಭಾರತೀಯ ಅಧಿಕಾರಿಗಳು ನಿರ್ಬಂಧಗಳನ್ನು ಸಡಿಲಗೊಳಿಸಿದ್ದಾರೆ. ಈ ಹಿನ್ನೆಲೆ ತಾಜ್ ಮಹಲ್ ಸಂದರ್ಶಕರ ಭೇಟಿಗೆ ಮತ್ತೆ ಅವಕಾಶ ನೀಡಿದೆ.
ಸೋಂಕುಗಳು ಮತ್ತು ಸಾವು ಪ್ರಮಾಣಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಖಲೆಯ ಮಟ್ಟಕ್ಕೆ ಏರಿತ್ತು. ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಮಾಡಲಾಗಿದೆ. ಹಲವಾರು ಸ್ಮಾರಕ ಸ್ಥಳಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿತ್ತು.
ಇತ್ತೀಚಿನ ವಾರಗಳಲ್ಲಿ ಪ್ರಕರಣಗಳು ಇಳಿಮುಖವಾಗಿದ್ದು, ನವದೆಹಲಿ ಮತ್ತು ಮುಂಬೈ ಸೇರಿದಂತೆ ಹಲವಾರು ಪ್ರಮುಖ ನಗರಗಳು ಅನೇಕ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ತಾಜ್ ಮಹಲ್ ಇರುವ ಆಗ್ರಾದಲ್ಲಿ, ಭಾರತದ ಉನ್ನತ ಪ್ರವಾಸಿ ತಾಣಗಳು ಬುಧವಾರ ಮತ್ತೆ ತೆರೆದಿದೆ.
ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ 17 ನೇ ಶತಮಾನದಲ್ಲಿ ನಿರ್ಮಿಸಿದ ಈ ಪ್ರೀತಿಯ ಸ್ಮಾರಕವನ್ನು ಕಳೆದ ಮಾರ್ಚ್ನಲ್ಲಿ ಮುಚ್ಚಲಾಗಿದೆ. ಸೆಪ್ಟೆಂಬರ್ನಲ್ಲಿ ಮತ್ತೆ ತೆರೆಯಲಾಗಿತ್ತು. ಮತ್ತೆ ಏಪ್ರಿಲ್ನಲ್ಲಿ ಮುಚ್ಚಲಾಯಿತು. ಈಗ ಮತ್ತೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆರಂಭದ ಮೊದಲ ದಿನ ಜನಸಂದಣಿ ಕಡಿಮೆಯಾಗಿತ್ತು. ಇನ್ನು ದಿನಕ್ಕೆ 650 ಸಂದರ್ಶಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ 40 ವರ್ಷದ ಬ್ರೆಜಿಲ್ನ ಸಂದರ್ಶಕಿ ಮೆಲಿಸ್ಸಾ ಡಲ್ಲಾ ರೋಸಾ, "ನಾನು ತಾಜ್ಮಹಲ್ ನೋಡಲು ತುಂಬಾ ಉತ್ಸಾಹಿತಳಾಗಿದ್ದೇನೆ. ಇದು ಅದ್ಭುತವಾಗಿದೆ" ಎಂದಿದ್ದಾರೆ.