ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಸಿ.ಆರ್.ಸತ್ಯ ವಿಧಿವಶ
ಬೆಂಗಳೂರು: ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಸಿ.ಆರ್.ಸತ್ಯ ಅವರು ಅನಾರೋಗ್ಯದಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಸ್ರೋದ ಈ ಮಾಜಿ ರಾಕೆಟ್ ವಿಜ್ಞಾನಿ, ಎ. ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮೊಗ, ವಿಜ್ಞಾನ ಲೇಖಕರಾಗಿದ್ದ ಸಿ.ಆರ್.
ಇಸ್ರೋದ ಈ ಮಾಜಿ ರಾಕೆಟ್ ವಿಜ್ಞಾನಿ, ಸಿ.ಆರ್. ಸತ್ಯ. ಇಸ್ರೋದ ರಾಕೆಟ್ ಮೈಲುಗಲ್ಲು ಇಡುವ ಆರಂಭದಲ್ಲಿ ಬೆನ್ನೆಲುಬಾಗಿದ್ದ ಇವರಿಗೆ ಅಣು ತಜ್ಞ ಡಾ. ರಾಜರಾಮಣ್ಣ ಅವರು ಮಾರ್ಗದರ್ಶಕರಾಗಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ರಂಗದಲ್ಲಿ ಅಮೋಘ ಸೇವೆ ಸಲ್ಲಿಸಿದ್ದರು.ಬಾಹ್ಯಾಕಾಶ ವಿಜ್ಞಾನಿಯಾಗಿರದೆ ಉತ್ತಮ ಬರಹಗಾರರಾಗಿದ್ದರು. ಲಲಿತ ಪ್ರಬಂಧಗಳ ಜೊತೆಗೆ ಅವರು ಬರೆದ ಶಿಶು ಗೀತೆ ' ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ' ಕೇಳದ ಕನ್ನಡಿಗನಿಲ್ಲ ಎನ್ನವಷ್ಟು ಪ್ರಸಿದ್ದಿ ಪಡೆದಿದೆ.