ಕೋವಿಡ್ ಸನ್ನದ್ಧತೆ ; ಇಂದು ರಾಜ್ಯಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸಭೆ

ಕೋವಿಡ್ ಸನ್ನದ್ಧತೆ ; ಇಂದು ರಾಜ್ಯಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸಭೆ

ವದೆಹಲಿ : ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಇಂದು ಸಂಜೆ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ ಸನ್ನದ್ಧತೆಯನ್ನು ಪರಿಶೀಲಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

ಏಪ್ರಿಲ್ 10, 11 ರಂದು ರಾಷ್ಟ್ರವ್ಯಾಪಿ ಮಾಕ್ ಡ್ರಿಲ್

ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಶನಿವಾರ ಹೊರಡಿಸಿದ ಜಂಟಿ ಸಲಹೆಯ ಪ್ರಕಾರ, ವೈದ್ಯಕೀಯ ಉಪಕರಣಗಳು, ಆಮ್ಲಜನಕ, ವ್ಯವಸ್ಥಿತ ಹಾಸಿಗೆಗಳ ಸೌಲಭ್ಯ ಕುರಿತಂತೆ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.ಇಮದು ನಡೆಯಲಿರುವ ಸಭೆಯಲ್ಲಿ ಕೋವಿಡ್ ಮಾಕ್ ಡ್ರಿಲ್ ಬಗ್ಗೆ ರಾಜೇಶ್ ಭೂಷಣ್ ಅವರು ಮಾಹಿತಿ ನೀಡಲಿದ್ದಾರೆ.

ಪ್ರಧಾನಿ ಮೋದಿಯವರ ಪರಿಶೀಲನಾ ಸಭೆ

ಕಳೆದ ವಾರ ಪಿಎಂ ಮೋದಿ ಅವರು ಆರೋಗ್ಯ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ನ ಸನ್ನದ್ಧತೆ, ಲಸಿಕೆ ಅಭಿಯಾನದ ಸ್ಥಿತಿ, ಹೊಸ ಕೋವಿಡ್ ರೂಪಾಂತರಗಳು ಮತ್ತು ಇನ್ಫ್ಲುಯೆನ್ಸ ಪರಿಸ್ಥಿತಿಯನ್ನು ನಿರ್ಣಯಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದರು.