ಆಮಿರ್ ಖಾನ್ 3ನೇ ಮದುವೆ ಬಗ್ಗೆ ಬಿಗ್ ನ್ಯೂಸ್; ಅಧಿಕೃತವಾಗಿ ಘೋಷಣೆ ಯಾವಾಗ?

ಸೆಲೆಬ್ರಿಟಿಗಳ ದುನಿಯಾದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಛೇದನ ಮುಂತಾದ ವಿಚಾರಗಳೆಲ್ಲ ತುಂಬ ಕಾಮನ್ ಎಂಬಂತಾಗಿದೆ.
ಸಹ ನಟಿಯೊಬ್ಬರನ್ನು ಮದುವೆ ಆಗುವ ಸಲುವಾಗಿಯೇ ಕಿರಣ್ ರಾವ್ಗೆ ಆಮಿರ್ ಖಾನ್ ವಿಚ್ಛೇದನ ನೀಡಿದರು ಎಂಬ ಸುದ್ದಿ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈಗ ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಅಲ್ಲದೇ, ಆಮಿರ್ ಖಾನ್ ತಮ್ಮ ಮೂರನೇ ಮದುವೆಯ ಬಗ್ಗೆ ಯಾವಾಗ ಅಧಿಕೃತ ಘೋಷಣೆ ಮಾಡುತ್ತಾರೆ ಎಂಬ ಸುಳಿವು ಕೂಡ ಸಿಕ್ಕಿದೆ. ಆಮಿರ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರ ರಿಲೀಸ್ ಆದ ಕೂಡಲೇ ಅವರು 3ನೇ ಮದುವೆ ಬಗ್ಗೆ ಬಾಯಿ ಬಿಡಲಿದ್ದಾರೆ ಎನ್ನಲಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಡಿಸೆಂಬರ್ನಲ್ಲೇ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈಗ ಆಮಿರ್ ಖಾನ್ ಈ ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ಅವರು ಚಿತ್ರದ ಪ್ರಚಾರಕ್ಕಾಗಿ ಹೆಚ್ಚು ಸಮಯ ಮತ್ತು ಗಮನ ನೀಡಬೇಕಿದೆ. ಈ ಸಂದರ್ಭದಲ್ಲಿ 3ನೇ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡರೆ ಮಾಧ್ಯಮಗಳಲ್ಲಿ ಸಿನಿಮಾಗಿಂತಲೂ ಮದುವೆ ಸುದ್ದಿಯೇ ಹೆಚ್ಚು ರಾರಾಜಿಸುತ್ತದೆ. ಅದರಿಂದ ಸಿನಿಮಾದ ಪ್ರಚಾರಕ್ಕೆ ಪೆಟ್ಟು ಬೀಳಲಿದೆ. ಹಾಗಾಗಿ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಆದ ಕೂಡಲೇ ಅವರು 3ನೇ ಮದುವೆ ನಗ್ಗೆ ಬ್ರೇಕಿಂಗ್ ನ್ಯೂಸ್ ನೀಡಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಈ ಯಾವ ವಿಚಾರಗಳ ಬಗ್ಗೆಯೂ ಆಮಿರ್ ಖಾನ್ ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವ ನಟಿ ಜೊತೆ ಮದುವೆ ಆಗಬಹುದು ಎಂಬ ಕುತೂಹಲದ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.