ಅನಿವಾರ್ಯವಾಗಿ ಕಳ್ಳತನಕ್ಕೆ ಇಳಿದ ಈಕೆಯ ಹಿಂದಿದೆ ರೋಚಕ ಕಥೆ!

ಅನಿವಾರ್ಯವಾಗಿ ಕಳ್ಳತನಕ್ಕೆ ಇಳಿದ ಈಕೆಯ ಹಿಂದಿದೆ ರೋಚಕ ಕಥೆ!

ಬೆಂಗಳೂರು: ಈಕೆ ಕಳ್ಳತನ ಮಾಡುವುದೇ ಒಂದು ರೋಚಕ ಕಥೆ. ಆದರೆ ತನಿಖೆ ಮಾಡುವ ವೇಳೆ ಪೊಲೀಸರಿಗೆ ಈ ಮಹಿಳೆ ರೋಚಕ ಮಾಹಿತಿ ಹೊರ ಹಾಕಿದ್ದು ಎಲ್ಲರನ್ನೂ ನಿಬ್ಬೆರಗು ಮಾಡಿದೆ. ಈಕೆ ಹೇಳಿದ ಕಥೆ ಕೇಳಿದ ಪೊಲೀಸರೇ ಶಾಕ್​ ಆಗಿ ಹೆಚ್ಚಿನ ತನಿಖೆಯಲ್ಲಿ ತೊಡಗಿದ್ದಾರೆ.

ನರ್ಸ್​ ರೂಪದಲ್ಲಿ ಈಕೆ ಮಹಿಳೆಯರಿಂದ ಚಿನ್ನಾಭರಣ ಕಳವು ಮಾಡುತ್ತಿದ್ದಳು. ಈಕೆ ರೋಗಿಗಳನ್ನು ಚೆಕ್​ ಮಾಡುವ ನೆಪದಲ್ಲಿ ಉಂಗುರ, ಚಿನ್ನದ ಸರ, ಮುಂತಾದ ಆಭರಣಗಳನ್ನು ಕದಿಯುತ್ತಿದ್ದಳು. ಹೀಗೆ ಅಶೋಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಂದ ಚಿನ್ನಾಭರಣ ಕದ್ದು ಈಕೆ ಅಲ್ಲಿಂದ ಕಾಲ್ಕಿತ್ತಿದ್ದಳು. ಸಿಸಿಟಿವಿ ಆಧಾರದ ಮೇಲೆ ಆಕೆಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾಳೆ. ಈ ಸಂದರ್ಭ ಆಕೆ ತನ್ನ ಅಳಲನ್ನು ತೋಡಿಕೊಂಡಿದ್ದು ಪೊಲೀಸರಿಗೇ ಆಶ್ಚರ್ಯ ಉಂಟುಮಾಡುವ ಕಥೆಯನ್ನು ಹೇಳಿದ್ದಾಳೆ.

ಲಕ್ಷ್ಮಿ ಹೆಸರಿನ ಈಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್​ ಆಗಿ ಕೆಲಸ ನಿರ್ವಹಿಸುತ್ತಿದ್ದು ಈಕೆಗೆ ಕೆಲಸದ ಸ್ಥಳದಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಈ ವೇಳೆ ಮಹಿಳೆಯ ಪೋಟೊಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಆ ವ್ಯಕ್ತಿ ಮುಂದಾಗಿದ್ದಾನೆ. ನಿತ್ಯವೂ ಹಣ ನೀಡುವಂತೆ ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನನ್ನು ತಾನು ಬಚಾವ್​ ಮಾಡಿಕೊಳ್ಳಲು ಮಹಿಳೆ ಕಳ್ಳತನಕ್ಕೆ ಇಳಿದಿದ್ದಾಳೆ.

ಈಗ ಈಕೆ ನಿಡಿರುವ ಮಾಹಿತಿ ಆಧಾರದ ಮೇಲೆ ಆಕೆಗೆ ಬ್ಲಾಕ್ ಮೇಲ್ ಮಾಡಿದ ಅಸಾಮಿಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸದ್ಯ ಅಶೋಕನಗರ ಪೊಲೀಸರು ತನಿಖೆಯನ್ನು ಮುಂದುವರೆಸುತ್ತಿದ್ದಾರೆ.