ಅಂತಹ ಆಟಗಾರರು ಮರಗಳಲ್ಲಿ ಬೆಳೆಯುವುದಿಲ್ಲ, ಆತನಿಗೆ ಬದಲಿ ಯಾರೂ ಇಲ್ಲ': ಶಿಷ್ಯನನ್ನು ಬಿಟ್ಟುಕೊಡದ ಪಾಂಟಿಂಗ್

ಅಂತಹ ಆಟಗಾರರು ಮರಗಳಲ್ಲಿ ಬೆಳೆಯುವುದಿಲ್ಲ, ಆತನಿಗೆ ಬದಲಿ ಯಾರೂ ಇಲ್ಲ': ಶಿಷ್ಯನನ್ನು ಬಿಟ್ಟುಕೊಡದ ಪಾಂಟಿಂಗ್

ಳೆದ ವರ್ಷದ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾದ ರಿಷಬ್ ಪಂತ್, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದ ಪ್ರಮುಖ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಆಘಿರುವ ಪಂತ್‌, ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ಪಂತ್‌ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಲಭ್ಯ ವರದಿಗಳ ಪ್ರಕಾರ, ಅವರು ಲಘು ತರಬೇತಿಯನ್ನು ಆರಂಭಿಸಲು ಕನಿಷ್ಠ ಎರಡು ತಿಂಗಳು ಮತ್ತು ಪೂರ್ಣ ಪ್ರಮಾಣದ ಕ್ರಿಕೆಟ್ ಅಭ್ಯಾಸವನ್ನು ಪ್ರಾರಂಭಿಸಲು ಸುಮಾರು ನಾಲ್ಕರಿಂದ ಆರು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಅಂದರೆ, ಈ ವರ್ಷ ನಡೆಯಲಿರುವ ಐಪಿಎಲ್ ಸೇರಿದಂತೆ ಬಹುತೇಕ ಎಲ್ಲಾ ಸರಣಿಗಳನ್ನು ಪಂತ್‌ ಕಳೆದುಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂತ್‌ ಮುನ್ನಡೆಸಬೇಕಿತ್ತು. ಈ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಪಂತ್ ಈ ವರ್ಷ ತಂಡವನ್ನು ಮುನ್ನಡೆಸಲು ಮ್ಯಾಜಿಕ್‌ ನಡೆಯಬೇಕಷ್ಟೇ. ಆರೋಗ್ಯ ಮತ್ತು ಫಿಟ್‌ನೆಸ್‌ ವಿಚಾರದಲ್ಲಿ ಬಿಸಿಸಿಐ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಪಂತ್‌ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮತ್ತು ಡೆಲ್ಲಿ ತಂಡದ ಪ್ರಸ್ತುತ ಮುಖ್ಯ ಕೋಚ್ ರಿಕಿ ಪಾಂಟಿಂಗ್, ಪಂತ್‌ನಂತಹ ಆಟಗಾರರಿಗೆ ಬದಲಿ ಹುಡುಕುವುದು ಸುಲಭವಲ್ಲ ಎಂದು ಹೇಳಿದ್ದಾರೆ.