ಹೊಸ ದಾಖಲೆ ಸೃಷ್ಟಿಸಿದೆ ಚಿನ್ನದ ದರ; 70 ಸಾವಿರದ ಸಮೀಪದಲ್ಲಿದೆ ಬೆಳ್ಳಿ ಬೆಲೆ

ಹೊಸ ದಾಖಲೆ ಸೃಷ್ಟಿಸಿದೆ ಚಿನ್ನದ ದರ; 70 ಸಾವಿರದ ಸಮೀಪದಲ್ಲಿದೆ ಬೆಳ್ಳಿ ಬೆಲೆ

ದುವೆ ಸೀಸನ್ ಆರಂಭವಾಗುವ ಮುನ್ನವೇ ಬಂಗಾರದ ಬೆಲೆ ಗಗನಕ್ಕೇರಿದೆ. ಚಿನ್ನದ ದರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,400 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಭಾರೀ ಏರಿಕೆ ಕಾಣುತ್ತಿದೆ.

ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,236 ರೂಪಾಯಿ ಇತ್ತು, ಇಂದು ಆರಂಭಿಕ ವಹಿವಾಟಿನಲ್ಲೇ 56,500 ರೂಪಾಯಿಗೆ ತಲುಪಿತ್ತು. ಹಿಂದಿನ ದಿನದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 68,729 ರೂಪಾಯಿ ಇತ್ತು. ಇಂದು ಬೆಳ್ಳಿ ಪ್ರತಿ ಕೆಜಿಗೆ 69,960 ರೂಪಾಯಿ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಇದೇ ರೀತಿ ಏರಿಕೆಯಿದೆ.

ಚಿನ್ನದ ಬೆಲೆ 0.27 ಶೇಕಡಾ ಜಿಗಿತದೊಂದಿಗೆ ಪ್ರತಿ ಔನ್ಸ್‌ಗೆ 1,925.65 ಡಾಲರ್‌ ಆಗಿದೆ. ಬೆಳ್ಳಿ ದರ ಪ್ರತಿ ಔನ್ಸ್ 24.46 ಡಾಲರ್‌ಗೆ ತಲುಪಿದೆ. ನಿಮ್ಮ ನಗರದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಕೂಡ ನೀವು ಪರಶೀಲಿಸಬಹುದು. ಇದಕ್ಕಾಗಿ ನೀವು 8955664433ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು, ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್‌ ಬರುತ್ತದೆ.