ಹಾಸನದಲ್ಲಿ ನಿಲ್ಲಿಸಿದ್ದ ಬೈಕ್‌ ನಲ್ಲಿ ಬೆಂಕಿ; ನೋಡ ನೋಡುತ್ತಿದ್ದಂತೆಯೇ ಧಗ ಧಗ

ಹಾಸನದಲ್ಲಿ ನಿಲ್ಲಿಸಿದ್ದ ಬೈಕ್‌ ನಲ್ಲಿ ಬೆಂಕಿ; ನೋಡ ನೋಡುತ್ತಿದ್ದಂತೆಯೇ ಧಗ ಧಗ

ಹಾಸನ: ಜಿಲ್ಲೆಯ ಕೋರವಂಗಲ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ ನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ.

ಘಟನೆಯಲ್ಲಿ ಜೋಡಿ ಕೃಷ್ಣಾಪುರದ ನಿವಾಸಿ ಚಿದಾನಂದ್‌ ಎಂಬುವವರಿಗೆ ಸೇರಿದ ಬೈಕ್‌ ಆಗಿದೆ. ಈ ಅವಘಡದಿಂದ ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.ಕಡೂರಿನಿಂದ ಜೋಡಿ ಕೃಷ್ಣಾಪುರಕ್ಕೆ ಗ್ರಾಮಕ್ಕೆ ತೆರಳುತ್ತಿದ್ದ ಚಿದಾನಂದ್‌ ಅವರುನಡುವೆ ಕೋರವಂಗಲ ಗೇಟ್‌ ಬಳಿ ಬೈಕ್‌ ನಿಲ್ಲಿಸಿ ಬೇಕರಿಗೆ ಹೋಗಿದ್ದರು.ಈ ವೇಳೆ ಬೈಕ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೈಕ್‌ ಹೊತ್ತಿ ಉರಿಯುವುದನ್ನು ಕಂಡು ಬೈಕ್‌ ಸವಾರ ಹಾಗೂ ಮಾಲೀಕ ಚಿದಾನಂದ್‌ ಕಣ್ಣೀರಿಟ್ಟಿದ್ದಾರೆ. ಯಾರಾದ್ರೂ ಆರಿಸಿ ಎಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.