ಶಬರಿಮಲೆ ದೇಗುಲದಲ್ಲಿ ಮತ್ತೆ ಮಹಿಳೆಯರ ಪ್ರವೇಶ ವಿವಾದ

ಶಬರಿಮಲೆ ದೇಗುಲದಲ್ಲಿ ಮತ್ತೆ ಮಹಿಳೆಯರ ಪ್ರವೇಶ ವಿವಾದ

ಪಟ್ಟಣಾಂತಿಟ್ಟ: ಈ ಸಲದ ಶಬರಿಮಲೆ ಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಪೊಲೀಸರ ಕೈಪಿಡಿಯೊಂದು ವಿವಾದ ಹುಟ್ಟುಹಾಕಿದೆ. ಶಬರಿಮಲೆ ದೇಗುಲದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್‌ ಸಿಬ್ಬಂದಿಗೆ ವಿತರಿಸಿರುವ ಕೈಪಿಡಿಯಲ್ಲಿ, ‘2018ರ ಸುಪ್ರೀಂಕೋರ್ಟ್‌ ತೀರ್ಪಿನ ಅನುಸಾರ ಮಹಿಳೆಯರು ಸೇರಿ, ಎಲ್ಲ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿದೆ’ ಎಂದು ಬರೆಯಲಾಗಿದೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ರಾಜ್ಯದ ಎಲ್‌ಡಿಎಫ್‌ ಸರ್ಕಾರವು ಕೈಪಿಡಿ ಹಿಂದಕ್ಕೆ ಪಡೆದಿದೆ.