ವಿದ್ಯುತ್ ಬಳಕೆಗೆ ಬರಲಿದೆ ಸ್ಮಾರ್ಟ್ ಮೀಟರ್
ವಿದ್ಯುತ್ ಬಳಕೆ ಅಳೆಯುವುದನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರದ ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಅಡ್ವಾನ್ಸ್‍ಡ್ ಕಂಪ್ಯೂಟಿಂಗ್(ಸಿ-ಡಾಕ್) 'ಸ್ಮಾರ್ಟ್ ಎನರ್ಜಿ ಮೀಟರ್' ಅಭಿವೃದ್ಧಿಪಡಿಸಿದ್ದು, ಇದನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿ.(BEL) ತಯಾರಿಸಲಿದೆ. ಈ ಸ್ಮಾರ್ಟ್ ಮೀಟರ್ ನೇರವಾಗಿ ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳ ಸರ್ವರ್ ಜತೆ ಸಂಪರ್ಕ ಹೊಂದಿರುತ್ತದೆ. ಇದರಿಂದ ನಮಗ್ರ ವಿವರಗಳು ಲಭ್ಯವಾಗಲಿದೆ. ವಿದ್ಯುತ್ ಕಳ್ಳತನ ತಡೆಯಲು ಕೂಡ ಈ ಮೀಟರ್ ಸಹಕಾರಿ.