ಬೆಂಗಳೂರಿನಲ್ಲಿ 'ಅಮಾನವೀಯ ಕೃತ್ಯ' : 9 ಅಡಿ ಕಟ್ಟಡದಿಂದ ಎರಡು ಬೀದಿನಾಯಿ ಎಸೆದು ಕೊಂದು ವಿಕೃತಿ.
ಬೆಂಗಳೂರು : ಬೆಂಗಳೂರಿನಲ್ಲಿ ಅಮಾನವೀಯ ಘಟನೆ ವರದಿಯಾಗಿದ್ದು, 9 ಅಡಿಯ ಕಟ್ಟಡದಿಂದ ಎರಡು ಬೀದಿನಾಯಿ ಎಸೆದು ವಿಕೃತಿ ಮೆರೆದಿದ್ದಾರೆ.
ಬೆಂಗಳೂರಿನ ಕೆಂಗೇರಿಯ ಕೊಮ್ಮಘಟ್ಟದಲ್ಲಿ ಈ ಘಟನೆ ನಡೆದಿದ್ದು, ನಾಯಿ ಬಂದು ಅಪಾರ್ಟ್ ಮೆಂಟ್ ಗಲೀಜು ಮಾಡುತ್ತದೆ ಎಂದು ಎರಡು ಬೀದಿನಾಯಿಗಳನ್ನು ಅಪಾರ್ಟ್ ಮೆಂಟ್ ನಿಂದ ಎಸೆದಿದ್ದಾರೆ.
ಘಟನೆ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮುಗ್ದ ಜೀವಿಯನ್ನು ಅನ್ಯಾಯವಾಗಿ ಬಲಿಕೊಟ್ಟ ದುರುಳರಿಗೆ ತಕ್ಷ ಶಿಕ್ಷೆ ನೀಡಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.
ಸಾಂದರ್ಭಿಕ ಚಿತ್ರ