ಯುಪಿ ಹೆದ್ದಾರಿಯಲ್ಲೇ ಯುವಕಯೊಬ್ಬ ಬುಲೆಟ್ ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್, ಶಾಕಿಂಗ್

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ಚಲಾಯಿಸುತ್ತಲೇ ಸ್ಟಂಟ್ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಶುಕ್ರವಾರ, ಪಕ್ಬಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವನೊಬ್ಬ ಬುಲೆಟ್ ಬೈಕ್‌ನ ಬದಿಯಲ್ಲಿ ಕುಳಿತು ಸಾಹಸ ಮಾಡುತ್ತಿರುವುದು ವ ವಿಡಿಯೋದಲ್ಲಿ ಕಂಡುಬಂದಿದೆ.
ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ತಡೆಯಲು ನಿರಂತರ ಪರಿಶೀಲನಾ ಆರಂಭಿಸಿದ್ದಾರೆ. ಆದರೆ ಯುವಕರ ಮಾತ್ರ ಇಂತಹ ವಿಡಿಯೋ ಮಾಡುವ ಪ್ರಕ್ರಿಯನ್ನು ನಿಲ್ಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಯುಪಿ ಪೊಲೀಸ್ ಅಧಿಕಾರಿಗಳು ಬುಲೆಟ್‌ನ ಸಂಖ್ಯೆಯನ್ನು ಗುರುತಿಸಿದ್ದಾರೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.