ಮೈಗಾಡ್, ಹೀರೋಗಿಂತ ನಿಮಗೇ ವಿಶಲ್ ಜಾಸ್ತಿ: ಡಾ.ಸುಧಾಕರ್ ಹೊಗಳಿದ ರಮ್ಯಾ ಮೇಲೆ 'ಕೈ'ನಾಯಕರ ಕೆಂಗಣ್ಣು; ಮೋಹಕ ತಾರೆಗೆ ಬಿಜೆಪಿ ಗಾಳ?
ಯಾಕಂದ್ರೆ ನಿವು ರಾಜಕೀಯ ಕುಟುಂಬದಿಂದ ಬಂದವರಲ್ಲ. ಆದರೂ ರಾಜಕೀಯಕ್ಕೆ ಬಂದು ತುಂಬಾ ಹೆಸರನ್ನು ಪಡೆದಿದ್ದೀರಿ ಖುಷಿ ಆಗುತ್ತಿದೆ ಎಂದು ಸುಧಾಕರ್ ಅವರನ್ನು ರಮ್ಯಾ ಹಾಡಿ ಹೊಗಳಿದರು. ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಅಂತ ಎಂದು ಹಾಡಿಹೊಗಳಿದ್ದರು.ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ನಟಿ ರಮ್ಯಾ ಸಾರ್ವಜನಿಕ ವೇದಿಕೆಯಲ್ಲಿ ಬಿಜೆಪಿ ಸಚಿವರ ಬಗ್ಗೆ ಹೊಗಳಿಕೆ ಮಾತನಾಡಿದ್ದು ಕೈ ಮುಖಂಡರಿಗೆ ಇರಿಸು ಮುರುಸು ಉಂಟು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಮ್ಯಾ ಅವರ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ. ಈ ನಡುವೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ಜೋರಾಗಿದೆ. ಜನವರಿ 7ರಿಂದ ಆರಂಭವಾಗಿ ಜನವರಿ 14ರ ವರೆಗೂ ಅದ್ಧೂರಿಯಾಗಿ ನಡೆದ ಚಿಕ್ಕಬಳ್ಳಾಪುರ ಉತ್ಸವ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ತೆರೆಕಂಡಿದೆ.