ಊಟದ ವಿಚಾರಕ್ಕೆ ಗಲಾಟೆ ತಾಯಿಮಗ ಆತ್ಮಹತ್ಯೆ

ಊಟದ ವಿಚಾರಕ್ಕೆ ಗಲಾಟೆ ತಾಯಿಮಗ ಆತ್ಮಹತ್ಯೆ

ರಾಮನಗರ: ಶುಕ್ರವಾರ ರಾತ್ರಿ ಇಲ್ಲಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯಲಕ್ಷ್ಮಿ (45) ಹಾಗೂ ಅವರ ಪುತ್ರ ಹರ್ಷ (24) ಮೃತರು. ಇಬ್ಬರೂ ಬೇಕರಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರು.

ರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ಗಲಾಟೆಯಾಗಿದೆ. ಇದರಿಂದ ಮನನೊಂದು ತಾಯಿ ಮನೆಯ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಮಗ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಐಜೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.