ಮನೆಯಲ್ಲಿ ಪುಸ್ತಕ, ಕಂಪಾಸ್ ಬಿಟ್ಟು ಹರಿತವಾದ ತಲ್ವಾರ್ ಇಟ್ಕೊಳ್ಳಿ; ಮುತಾಲಿಕ್ ಪ್ರಚೋದನಾಕಾರಿ ಭಾಷಣ

ಬಾಗಲಕೋಟೆ : ಮನೆಯಲ್ಲಿ ಪುಸ್ತಕ, ಕಂಪಾಸ್ ಬಿಟ್ಟು ಹರಿತವಾದ ತಲ್ವಾರ್ ಇಟ್ಕೊಳ್ಳಿ ಎಂದು ಶ್ರೀರಾಮಸೇನೆ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಯುವತಿಯರನ್ನು ಮೋಸದ ಬಲೆಗೆ ಬೀಳಿಸಿ ಲವ್ ಜಿಹಾದ್ ನಡೆಸಲಾಗುತ್ತಿದೆ.
ಇವತ್ತು ಹಿಂದೂಗಳ ಮನೆಗಳಲ್ಲಿ ಮಂಡ ಚಾಕೂನು ಇಲ್ಲ, ಬಡಿಗಿ ಕೂಡ ಇಲ್ಲ, ಎಲ್ಲರ ಮನೆಯಲ್ಲಿ ಒಂದು ಹರಿತವಾದ ತಲವಾರ್ ಇಟ್ಟುಕೊಳ್ಳಬೇಕು. ಶಸ್ತ್ರ ಪೂಜೆ, ಆಯುಧ ಪೂಜೆ ನಮ್ಮಲ್ಲಿ ಇದೆ. ಹೀಗಾಗಿ ನಮ್ಮ ಮನೆಗಳಲ್ಲಿ ಚಾಕು, ತಲವಾರ್, ಕೊಡಲಿ ಇಟ್ಟುಕೊಳ್ಳಬೇಕು ಇದು ನಮ್ಮಲ್ಲಿ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.