ಮಂಡ್ಯದಲ್ಲಿ ʼಗೋ ಬ್ಯಾಕ್ ಅಶೋಕ್' ಅಭಿಯಾನ ʼಹಿಂದೆ ಯಾರೋ ಇದ್ದಾರೆʼ : ಸಿ.ಟಿ.ರವಿ ಕಿಡಿ

ಮಂಡ್ಯದಲ್ಲಿ ʼಗೋ ಬ್ಯಾಕ್ ಅಶೋಕ್' ಅಭಿಯಾನ ʼಹಿಂದೆ ಯಾರೋ ಇದ್ದಾರೆʼ : ಸಿ.ಟಿ.ರವಿ ಕಿಡಿ

ಬೆಂಗಳೂರು : ಕಂದಾಯ ಸಚಿವ ಆರ್. ಅಶೋಕ್‌ ವಿರುದ್ಧ ಮಂಡ್ಯದಲ್ಲಿ ಮತ್ತೆ ಗೋ ಬ್ಯಾಕ್ ಅಶೋಕ್ ಅಭಿಯಾನ ಶುರುವಾಗಿದೆ. ಈ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು,ʻ ಹಿಂದೆ ಯಾರೋ ಇದ್ದಾರೆ ಎಂದು ತಿಳಿದುಕೊಳ್ಳುವೆ ʼ ಎಂದಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಅಶೋಕ್ ಗೋ ಬ್ಯಾಕ್ ಅಭಿಯಾನ ಮುಂದುವರೆದಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈಓವರ್ ಕೆಳಗೆ ಅಪರಿಚಿತರು ಗೋ ಬ್ಯಾಕ್ ಅಶೋಕ್ ಎಂದು ಕೈ ಬರಹ ಬರೆಯಲಾಗಿದೆ. ಈ ಹಿಂದೆ ಮಂಡ್ಯದಲ್ಲಿ ಗೋಡೆಗಳ ಮೇಲೆಯೂ ಅಶೋಕ್ ಗೋ ಬ್ಯಾಕ್ ಎಂಬ ಪೋಸ್ಟರ್ ಅಂಟಿಸಿ ಆಕ್ರೋಶವನ್ನು ಹೊರಹಾಕಲಾಗಿದೆ. ಈ ಅಭಿಯಾನದ ಹಿಂದೆ ಯಾರೋ ಇದ್ದಾರೆ ಅನ್ನೋದನ್ನು ತಿಳಿದುಕೊಳ್ಳುವೆ. ಮಂಡ್ಯದಲ್ಲಿ ಆಶೋಕ್‌ಗೆ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಮಾಡಿದ್ದಾರೆ. ನಮಗೆ ಯಾರ ಜೊತೆಯೂ ಒಳ ಒಪಂದವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.