ಭಾರತ'ವನ್ನು ಒಡೆಯುವ ಪ್ರಯತ್ನಗಳು ನಮ್ಮ 'ನಾಗರಿಕತೆ'ಯನ್ನು ಕೊನೆಗೊಳಿಸಲು ವಿಫಲವಾಗಿವೆ ; ಪ್ರಧಾನಿ ಮೋದಿ

ರಾಜಸ್ಥಾನ: ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ನಾವು ಹೆಮ್ಮೆಪಡುತ್ತೇವೆ. ಪ್ರಪಂಚದ ಹಲವಿ ನಾಗರಿಕತೆಗಳು ಕಾಲಾನಂತರದಲ್ಲಿ ಕೊನೆಗೊಂಡವು. ಭಾರತವನ್ನು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಸೈದ್ಧಾಂತಿಕವಾಗಿ ಒಡೆಯಲು ಹಲವು ಪ್ರಯತ್ನಗಳು ನಡೆದಿವೆ.
ಪ್ರಧಾನಿ ಮೋದಿಯವರು ರಾಜಸ್ಥಾನದಲ್ಲಿ ಭಗವಾನ್ ಶ್ರೀ ದೇವನಾರಾಯಣ ಅವರ 1111 ನೇ ಅವತಾರ ಮಹೋತ್ಸವದ ಸ್ಮರಣಾರ್ಥ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ಕೇವಲ ಭೂಪ್ರದೇಶವಲ್ಲ, ನಮ್ಮ ನಾಗರಿಕತೆ, ಸಂಸ್ಕೃತಿ, ಸಾಮರಸ್ಯ ಮತ್ತು ಸಾಧ್ಯತೆಗಳ ಅಭಿವ್ಯಕ್ತಿಯಾಗಿದೆ. ಅದಕ್ಕಾಗಿಯೇ ಭಾರತವು ತನ್ನ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿದೆ. ಇದರ ಹಿಂದಿನ ದೊಡ್ಡ ಸ್ಫೂರ್ತಿ ನಮ್ಮ ಸಮಾಜದ ಶಕ್ತಿ, ದೇಶದ ಕೋಟ್ಯಂತರ ಜನರು ಎಂದೇಳಿದ್ದಾರೆ.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಗುರ್ಜರ್ ಸಮುದಾಯದಿಂದ ಪೂಜಿಸಲ್ಪಡುವ ದೇವನಾರಾಯಣ ಅವರ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಮಹಾವಿಷ್ಣುವಿನ ಅವತಾರವೆಂದು ನಂಬಲಾದ ದೇವನಾರಾಯಣ ಜನ್ಮಸ್ಥಳವಾದ ಮಲಸೇರಿ ಡುಂಗ್ರಿ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಗ್ರಾಮವು ಭಿಲ್ವಾರದಿಂದ 60 ಕಿ.ಮೀ ದೂರದಲ್ಲಿದೆ.
ಗುರ್ಜರ್ ಸಮುದಾಯವು ವಿಶೇಷವಾಗಿ ಪೂರ್ವ ರಾಜಸ್ಥಾನದಲ್ಲಿ ಹಲವು ಅಸೆಂಬ್ಲಿ ಸ್ಥಾನಗಳ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದೆ.
ಪ್ರಧಾನಿ ಮೋದಿ ಈ ಹಿಂದೆ ಕಳೆದ ವರ್ಷ ನವೆಂಬರ್‌ನಲ್ಲಿ ಬನ್ಸ್ವಾರಾ ಜಿಲ್ಲೆಯ ಬುಡಕಟ್ಟು ಜನರ ಪವಿತ್ರ ಸ್ಥಳವಾದ ಮಂಗಧ್ ಧಾಮ್‌ಗೆ ಭೇಟಿ ನೀಡಿದ್ದರು.