ಭಯೋತ್ಪಾದನೆಯನ್ನು ಎಂದಿಗೂ ಯಾವ ಧರ್ಮ, ಗುಂಪುಗಳಿಗೆ ಜೋಡಿಸಬಾರದು: ಶಾ
ಹೊಸದಿಲ್ಲಿ: ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಅಪಾಯಕಾರಿಯಾಗಿದ್ದು, ಅದರ ಬೆದರಿಕೆಯನ್ನು ಯಾವುದೇ ಧರ್ಮ ಅಥವಾ ಗುಂಪಿನೊಂದಿಗೆ ಜೋಡಿಸಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಂಸಾಚಾರವನ್ನು ನಡೆಸಲು, ಯುವಕರನ್ನು ಬಳಸಿಕೊಳ್ಳಲು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಲು ಭಯೋತ್ಪಾದಕರು ನಿರಂತರವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಲವು ವಿಷಯವನ್ನು ಹರಡಲು ಡಾರ್ಕ್ನೆಟ್ ಅನ್ನು ಬಳಸುತ್ತಿದ್ದಾರೆ ಎಂದರು.