ಇನ್ಫೋಸಿಸ್, ಇಂಟೆಲ್ಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ
ವಾರ್ಷಿಕವಾಗಿ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ರಫ್ತು ವಹಿವಾಟು ನಡೆಸುತ್ತಿರುವ ಇನ್ಫೋಸಿಸ್ ಮತ್ತು ಇಂಟೆಲ್ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕ್ಗಳ ಒಕ್ಕೂಟದ ಪ್ರತಿಷ್ಠಿತ ‘ಕರ್ನಾಟಕ ಐಟಿ ರತ್ನ’ ಪ್ರಶಸ್ತಿಯನ್ನು ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗುರುವಾರ ಪ್ರದಾನ ಮಾಡಲಾಯಿತು. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಟಿಸಿಎಸ್, ಬಾಶ್, ಮೈಂಡ್ ಟ್ರೀ ಸೇರಿ 21 ಕಂಪನಿಗಳಿಗೆ ‘ಐಟಿ ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿಯನ್ನು ನೀಡಿದರು.