ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಬೆಂಗಳೂರಿನಲ್ಲಿʼ 24 ಗಂಟೆಗಳಲ್ಲಿ ತುಂತುರು ಮಳೆʼ ಸಾಧ್ಯತೆ

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಸಿಲಿಕಾನ್ ಸಿಟಿಯ ಸುತ್ತುಮುತ್ತ ವಿಪರೀತ ಥಂಡಿಯಾಗಿದ್ದು, ತಣ್ಣನೆಯ ಸುಳಿಗಾಳಿ, ಮೋಡ ಕವಿದ ವಾತಾವರಣ, ಸುಡುವ ಬಿಸಿಲು ಬೆಂಗಳೂರು ನಗರದ ಹವಾಮಾನ ದಿನ ದಿನ ಬದಲಾಗುತ್ತಿದೆ.ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ನಗರದಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಜನರು ಆಚೇ ಬರೋದಕ್ಕು ಹಿಂದೇಟು ಹಾಕುತ್ತಿದ್ದಾರೆ. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ ತನಕ ತಮಿಳುನಾಡಿನ ಕರಾವಳಿ ಜಿಲ್ಲೆಗಳು, ಪದುಚೇರಿ ಮತ್ತು ಕಾರೈಕಲ್, ಕನ್ಯಾಕುಮಾರಿ, ತೂತುಕುಡಿ, ರಾಮನಾಥಪುರಂ, ಶಿವಗಂಗೆ, ಪುದುಕೊಟ್ಟೈ, ನಾಗಪಟ್ಟಣಂ, ಕಡಲೂರು ಸೇರಿದಂತೆ 11 ಜಿಲ್ಲೆಗಳಲ್ಲಿ ವಾಯುಭಾರ ಕುಸಿದ ಪ್ರಭಾವದಿಂದ ಮಳೆಯಾಗಲಿದೆ.
ಇನ್ನೂ ಚೆನ್ನೈನಲ್ಲಿ ಮೋಡ ಕವಿದ ವಾತಾವರಣವಿದೆ, ಗರಿಷ್ಠ ತಾಪಮಾನ 30 ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನಲಾಗಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಹಿನ್ನೆಲೆ ಸಮುದ್ರ ಬದಿ ತೆರಳದಂತೆ ವೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ