ನವದೆಹಲಿ: ಗುರಿತಲುಪದ ಜಲಜೀವನ ಮಿಷನ್ ಯೋಜನೆ

ನವದೆಹಲಿ: ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸುವ ಗಡುವು ಸಮೀಪಿಸುತ್ತಿದ್ದರೂ, ಕೇವಲ ಶೇ 50.3 ಕುಟುಂಬಗಳಿಗೆ ಮಾತ್ರ ನೀರು ಒದಗಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಆಗಸ್ಟ್ 2019 ರಲ್ಲಿ ಕೇಂದ್ರವು ಪ್ರಾರಂಭಿಸಿದ ಜೆಜೆಎಂ ಅಡಿಯಲ್ಲಿ, ದೇಶದ ಎಲ್ಲಾ 18.93 ಗ್ರಾಮೀಣ ಕುಟುಂಬಗಳಿಗೆ 2024 ರ ವೇಳೆಗೆ ಕುಡಿಯುವ ನೀರಿನ ಸಂಪರ್ಕಗಳನ್ನು ಒದಗಿಸಬೇಕಿತ್ತು.
ಮಿಷನ್ ಪ್ರಾರಂಭಿಸುವ ಸಮಯದಲ್ಲಿ, ಅಂದರೆ ಆಗಸ್ಟ್ 2019 ರಲ್ಲಿ, 18.93 ಗ್ರಾಮೀಣ ಕುಟುಂಬಗಳಲ್ಲಿ ಕೇವಲ 17 ಪ್ರತಿಶತದಷ್ಟು ಕುಟುಂಬಗಳು ಮಾತ್ರ ಕುಡಿಯುವ ನೀರನ್ನು ಬಳಸಿದ್ದವು ಎಂದು ಸಚಿವಾಲಯ ಹೇಳಿಕೊಂಡಿದೆ.