ಕುಂದಾಪುರ:ಬೈಂದೂರು ಕ್ಷೇತ್ರಕ್ಕೆ ಜೆ.ಪಿ ನಡ್ಡಾ ಭೇಟಿ, ಮುಳ್ಳಿಕಟ್ಟೆಯಲ್ಲಿ ಸಿದ್ದತೆ

ಕುಂದಾಪುರ: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಫೆ.20 ಸೋಮವಾರ ದಂದು ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭೆ ಕ್ಷೇತ್ರದ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಗಾತ್ರದ ಪೆಂಡಾಲ್‍ನ್ನು ಹಾಕಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ವಾಗುತ್ತಿರುವ ಹೊತ್ತಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದೆ.ಸಮಾವೇಶದಲ್ಲಿ 20,000 ಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಹೇಲಿಪ್ಯಾಡ್ ನಿರ್ಮಾಣ: ಹೊಸಾಡು ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಜೆ.ಪಿ ನಡ್ಡಾ ಅವರು ಭಾಗವಹಿಸುತ್ತಿರುವುದರಿಂದ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿ ಹೇಲಿಪ್ಯಾಡ್ ನಿರ್ಮಾಣದ ಕಾರ್ಯ ನಡೆಯುತ್ತಿದೆ.ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರುಗಳು ಭಾಗವಹಿಸುತ್ತಿರುವುದರಿಂದ ಬೈಂದೂರು ಬಿಜೆಪಿ ಮಂಡಲ ಭರ್ಜರಿ ತಯಾರಿಯನ್ನು ಮಾಡಿಕೊಂಡಿದ್ದೆ.