ಚಂದ್ರಶೇಖರ ಕಂಬಾರರ ನಾಟಕ ತಿರುಚಿದ ಆರೋಪ; ಪೊಲೀಸ್ ಆಯುಕ್ತರಿಗೆ ದೂರು

ಮೈಸೂರು: ಡಿ.31 ರಂದು ರಾತ್ರಿ ಮೈಸೂರಿನ ರಂಗಾಯಣದ ಭೂಮಿಗೀತಾದಲ್ಲಿ ನಡೆದ ಡಾ. ಚಂದ್ರಶೇಖರ್ ಕಂಬಾರ ಸಾಂಬಶಿವ ಪ್ರಹಾಸನ ನಾಟಕವನ್ನು ಅಸಹ್ಯಕರವಾಗಿ ತಿರುಚಿ ಪ್ರದರ್ಶಿಸಲಾಗಿದೆ. ರಂಗಾಯಣದಲ್ಲಿ ನನ್ನ ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದವರ ಮೇಲೆ & ಇಲ್ಲದ ಸಾಹಿತ್ಯ ಸೇರಿಸಿದ ನಿರ್ದೇಶಕರ ಮೇಲೂ ಕ್ರಮವಹಿಸಬೇಕು ಎಂದು ಮೈಸೂರು ನಗರದ ಪೊಲೀಸರಿಗೆ ಪತ್ರದ ಮೂಲಕ ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದ್ದಾರೆ.