ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಭರ್ಜರಿ ನ್ಯೂಸ್ ; ಶೇ.38ರಿಂದ ಶೇ.42ಕ್ಕೆ ಡಿಎ ಹೆಚ್ಚಳ, ಜ.1ರಿಂದ್ಲೇ ಅನ್ವಯ

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಭರ್ಜರಿ ನ್ಯೂಸ್ ; ಶೇ.38ರಿಂದ ಶೇ.42ಕ್ಕೆ ಡಿಎ ಹೆಚ್ಚಳ, ಜ.1ರಿಂದ್ಲೇ ಅನ್ವಯ

ವದೆಹಲಿ : ಕೇಂದ್ರ ಸರ್ಕಾರ ಈಗಾಗಲೇ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನ ಶೇಕಡ 38ರಿಂದ ಶೇಕಡ 42ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದೆ. ಸಧ್ಯ ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 01.01.2023 ರಿಂದ ಜಾರಿಗೆ ಬರುವಂತೆ ನೌಕರರ ತುಟ್ಟಿಯನ್ನ ಹೆಚ್ಚಿಸಲಾಗುದು ಎಂದು ತಿಳಿಸಿದೆ.

ಅಂದ್ಹಾಗೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ಶೇಕಡಾ 4 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾರ್ಚ್ 24, 2023 ರಂದು ಘೋಷಿಸಿದರು.

ಇತ್ತೀಚಿನ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಶೇಕಡಾ 42 ಕ್ಕೆ ಹೆಚ್ಚಿಸಲಾಗುವುದು. ಈ ಕ್ರಮದಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಠಾಕೂರ್ ಹೇಳಿದರು. ಡಿಎ ಮತ್ತು ಡಿಆರ್ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜನವರಿ 1, 2023 ರಿಂದ ಪೂರ್ವಾನ್ವಯವಾಗುವಂತೆ ಅನ್ವಯವಾಗಲಿದೆ.