ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗೆ ಬೆಲೆಯೇ ಇಲ್ಲ: ಆರಗ ಜ್ಞಾನೇಂದ್ರ

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗೆ ಬೆಲೆಯೇ ಇಲ್ಲ: ಆರಗ ಜ್ಞಾನೇಂದ್ರ

ರೀಕೆರೆ: ದೇಶದಲ್ಲಿ ಈಗಾಗಲೇ ಕಾಂಗ್ರೆಸ್‌ನ ಗ್ಯಾರಂಟಿ ಅವಧಿ  ಮುಗಿದು ಹೋಗಿದೆ. ಇದರ ನಡುವೆ ಕಾಂಗ್ರೆಸ್ಸಿಗರು ಜನರಿಗೆ ಗ್ಯಾರಂಟಿ ಕಾರ್ಡ್‌ ನೀಡಲು ಹೊರಟಿದ್ದಾರೆ. ಗ್ಯಾರಂಟಿಯೇ ಇಲ್ಲದವರು ಕೊಡುವ ಗ್ಯಾರಂಟಿ ಕಾರ್ಡ್‌ಗೆ ಬೆಲೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರಲ್ಲಿಯೂ ಕಾಂಗ್ರೆಸ್‌ ಗ್ಯಾರಂಟಿ ನೀಡಿತ್ತು. ಆದರೆ ಅದನ್ನು ಈಡೇರಿಸುವಲ್ಲಿ ವಿಫಲವಾಗಿತ್ತು. ಬಡವರನ್ನು ಹಿಂಡಿ ಹಿಪ್ಪೆ ಮಾಡಿದ್ದು ಕಾಂಗ್ರೆಸ್‌. ಧರ್ಮ-ಧರ್ಮಗಳ ನಡುವೆ ಭೇದಭಾವ ಉಂಟು ಮಾಡಿದ ಅಪಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಅಧಿ ಕಾರದ ಹಪಾಹಪಿಯಿಂದ ಕಾಂಗ್ರೆಸ್‌ ಉಚಿತ ಕೊಡುಗೆ ಆಸೆ ತೋರಿಸಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ರಾಜ್ಯದ ನಾಲ್ಕು ಮೂಲೆಗಳಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುತ್ತಿದೆ. ಮಾ.25ರಂದು ದಾವಣಗೆರೆಯಲ್ಲಿ ಸಮಾರೋಪ ನಡೆಯಲಿದೆ. 10ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಮಾಡಿರುವ ಸಾಧನೆಯನ್ನು ಜನರಿಗೆ ತಿಳಿಸಲು ಜನಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಉಳ್ಳವರ ಪಕ್ಷವಲ್ಲ. ಬಡವ, ದಲಿತ ಮತ್ತು ದಮನಿತರ ಪಕ್ಷ. ಅವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಅನುಷ್ಠಾನಗೊಳಿಸಿದೆ ಎಂದರು.