ಕರ್ನಾಟಕ ಸಾರಿಗೆ ಬಸ್‌ಗೆ ಕಪ್ಪು ಮಸಿ ಬಳಿದು ಪುಂಡಾಟ ಮೆರೆದ ಮರಾಠ ಮಹಾಸಂಘ

ಕರ್ನಾಟಕ ಸಾರಿಗೆ ಬಸ್‌ಗೆ ಕಪ್ಪು ಮಸಿ ಬಳಿದು ಪುಂಡಾಟ ಮೆರೆದ ಮರಾಠ ಮಹಾಸಂಘ

ಪುಣೆ: ಕರ್ನಾಟಕ ಸಾರಿಗೆ ಬಸ್‌ಗೆ ಕಪ್ಪು ಮಸಿ ಬಳಿದು ಮರಾಠ ಮಹಾಸಂಘ ಪುಂಡಾಟ ಮೆರೆದ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆ ಜಿಲ್ಲೆಯ ದೌಂಡ್‌ನಲ್ಲಿ ನಿಪ್ಪಾಣಿ-ಔರಂಗಾಬಾದ್ ಬಸ್‌ನಲ್ಲಿ 'ಜೈ ಮಹಾರಾಷ್ಟ್ರ' & 'ಜಾಹಿರ್ ನಿಷೇಧ್'(ಖಂಡನೆ) ಪದಗಳನ್ನು ಕಪ್ಪು ಬಣ್ಣದಲ್ಲಿ ಬರೆದು ತಮ್ಮ ಪುಂಡಾಟವನ್ನು ಮೆರೆದಿದ್ದಾರೆ. ಕರ್ನಾಟಕ & ಮಹಾರಾಷ್ಟ್ರ ನಡುವಿನ ಗಡಿ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಪ್ರತಿಭಟನೆಯ ಸಂಕೇತವಾಗಿ, ಬಸ್ಸುಗಳ ಮೇಲೆ ಕಪ್ಪು ಮಸಿ ಬಳಿದಿದ್ದಾರೆ.