ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ಡಿ.14ರಂದು ಸಿಎಂಗಳ ಜೊತೆ ಅಮಿತ್ ಶಾ ಸಭೆ

ನವದೆಹಲಿ: ಗಡಿ ವಿವಾದ ಕುರಿತ ಉದ್ವಿಗ್ನ ಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಿ.14ರಂದು ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ NCP ನಾಯಕ ಅಮೋಲ್ ಕೊಲ್ಹೆ ಈ ವಿಚಾರ ಹೇಳಿದರು. ನಮ್ಮ ಅಹವಾಲುಗಳನ್ನು ಶಾ ಅವರು ತಾಳ್ಮೆಯಿಂದ ಆಲಿಸಿದರು. ಸೌಹಾರ್ದ ಪರಿಹಾರಕ್ಕಾಗಿ ಡಿ.14ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂಬುದಾಗಿ ತಿಳಿಸಿದರು ಎಂದಿದ್ದಾರೆ.