ಚಿನ್ನ, ಬೆಳ್ಳಿ ಇಂದು ದುಬಾರಿ

ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳವಾಗಿದೆ. ಬೆಳ್ಳಿ ದರವೂ ಏರಿಕೆಯಾಗಿದೆ. ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 250 ರೂ. ಹೆಚ್ಚಾಗಿ 49,750 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 280 ರೂ. ಹೆಚ್ಚಾಗಿ 54,280 ರೂ. ಆಗಿದೆ. 1 ಕೆಜಿ ಬೆಳ್ಳಿ ದರ 1400 ರೂ. ಏರಿಕೆಯಾಗಿ 67,600 ರೂ. ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ 49,800 ರೂ. ಇದೆ.