ಕತ್ನಳ್ಳಿ ಮಠದಿಂದ ಹೊರಬಿತ್ತು ರಾಜ್ಯ ರಾಜಕಾರಣದ ಭವಿಷ್ಯ; ನಾಲ್ಕರಲ್ಲಿ ಮತ್ತೊಂದು ಎದ್ದು ನಿಲ್ಲುತ್ತೆ!

ಚುನಾವಣೆ ಹೊಸ್ತಿಲಿನಲ್ಲಿ ಹತ್ತಿರವಿರುವಾಗಲೇ ಜನರಲ್ಲಿ ಕತ್ನಳ್ಳಿ ಮಠದ ರಾಜಕೀಯ ಭವಿಷ್ಯ ತೀವ್ರ ಕುತೂಹಲ ಮೂಡಿಸಿತ್ತು. ರಾಜ್ಯ ರಾಜಕಾರಣ ಬಗ್ಗೆ ಒಗಟಿನ ರೀತಿಯಲ್ಲಿ ಭವಿಷ್ಯ ಶಿವಯ್ಯ ಮುತ್ಯಾ ನುಡಿದರು.
ಚಮಕೇರಿ ಜಾತ್ರೆಯಲ್ಲಿ ಮತ್ತೊಂದು ಭವಿಷ್ಯ
ಈ ನಾಲ್ಕರಲ್ಲಿ ಮತ್ತೊಂದು ಎದ್ದು ನಿಲ್ಲುತ್ತೆ, ಎದ್ದು ನಿಲ್ತಿರೋದು, ಯಾವುದನ್ನ ಹಿಡಿದುಕೊಂಡು ಎದ್ದು ನಿಲ್ಲುತ್ತೆ ಅನ್ನೋದನ್ನ ಚಮಕೇರಿಯಲ್ಲಿ ನಡೆಯುವ ಜಾತ್ರೆಯ ಭವಿಷ್ಯದಲ್ಲಿ ಪೈನಲ್ ಹೇಳುವೆ ಎಂದು ಶಿವಯ್ಯ ಮುತ್ಯಾ ರಾಜಕಾರಣದ ಕುತೂಹಲವನ್ನು ಮತ್ತಷ್ಡು ಜಟಿಲಗೊಳಿಸಿದರು.
ರಾಜಕೀಯ ಅತಂತ್ರತೆಯ ಮುನ್ಸೂಚನೆ
ಮುಂಬರುವ ಚಮಕೇರಿ ಜಾತ್ರೆಯಲ್ಲಿ ರಾಜಕೀಯದ ಪೈನಲ್ ಭವಿಷ್ಯ ನುಡಿಯುವುದಾಗಿ ಶಿವಯ್ಯ ಮುತ್ಯಾ ಹೇಳಿದರು. ಕಿಚಡಿ ಸರ್ಕಾರ ರಚನೆಯಾಗುವ ಮುನ್ಸೂಚನೆಯನ್ನು ಶಿವಯ್ಯ ಮುತ್ಯಾ ಮತ್ತೊಮ್ಮೆ ನೀಡಿದರು. ಚುನಾವಣೆ ಬಳಿಕ ರಾಜಕೀಯ ಅತಂತ್ರತೆ ಉಂಟಾಗುವ ಮುನ್ಸೂಚನೆ ನೀಡಿದ್ದಾರೆ ಎಂದು ಶಿವಯ್ಯ ಮುತ್ಯಾ ಅವರ ಮಾತುಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.
ವಿಶ್ವಕ್ಕೆ ಭಾರತ ನಂಬರ್ ಒನ್
ಈಗ ರಾಜಕೀಯದಲ್ಲಿ ಗದ್ದಲ ನಡೆಯುತ್ತಿದೆ. ಭಾರತ ವಿಶ್ವದಲ್ಲೇ ನಂಬರ್ ಒನ್ ಆಗಲಿದೆ. ಭಾರತ ವಿಶ್ವಕ್ಕೆ ನಂಬರ್ ಒನ್ ಆಗಲು ಒಂದು ಸೂತ್ರವಿದೆ. ಆ ಸೂತ್ರ ಜಾರಿಗೆ ಬಂದರೆ ವಿಶ್ವವನ್ನೇ ಭಾರತ ಆಳಲಿದೆ ಎಂದು ಶಿವಯ್ಯ ಮುತ್ಯಾ ಮಾರ್ಮಿಕವಾಗಿ ಮುಂದೆ ಜಗತ್ತಿನ ದೊಡ್ಡಣ್ಣ ಆಗಲು ವಿಪುಲ ಅವಕಾಶ ಇರೋದರ ಬಗ್ಗೆ ಹೇಳಿದರು.
ಭಾರತ ಹೊರ ದೇಶಗಳನ್ನ ಆಳುವ ಸಮಯ ಬರಲಿದೆ. ಮೋಸ ಮಾಡಿ ಆಳುವದಿಲ್ಲ, ಪ್ರೀತಿಯಿಂದ ಭಾರತ ಬೇರೆ ದೇಶಗಳನ್ನ ಆಳಲಿದೆ ಎಂದು ದೇಶದ ಶಕ್ತಿ ಎಲ್ಲ ದೇಶದ ಅರಿವಿಗೆ ಬರಲಿದೆ ಎಂದು ನುಡಿದರು. ಆ ಸೂತ್ರ ಜಾರಿಗೆ ಬಂದ್ರೆ ಭಾರತ ದೇಶದಲ್ಲಿ ಬಡವರು ಯಾರು ಇರೋದಿಲ್ಲ, ಎಲ್ಲರೂ ಶ್ರೀಮಂತರು, ಎಲ್ಲರೂ ಸಮಾನರು ಆಗ್ತಾರೆ.
ಆ ಸೂತ್ರ ಜಾರಿಗೆ ಬರಲಿದೆ
ಸೂತ್ರ ಜಾರಿಗೆ ಬರಲು ವಿಘ್ನಗಳು ಅಡ್ಡ ಬರುತ್ತಿವೆ. ಎಷ್ಟೇ ಅಡೆ ತಡೆಯಾದರು ಆ ಸೂತ್ರ ಜಾರಿಗೆ ಬರಲಿದೆ ಎಂದು ಶಿವಯ್ಯ ಮುತ್ಯಾ ತಮ್ಮ ಭವಿಷ್ಯದಲ್ಲಿ ದೇಶದ ಮುಂದಿನ ಹೆಜ್ಜೆಯ ಸ್ಪಷ್ಟತೆ ನೀಡಿದರು.
ಏಕರೂಪ ಸಮಾನ ನಾಗರಿಕ ಸಂಹಿತೆಯ ಜಾರಿಯಾಗುವ ಸುಳಿವನ್ನು ನೀಡಿದರಾ ಎಂದು ಎನ್ನುವ ಪ್ರಶ್ನೆಯನ್ನು ಕತ್ನಳ್ಳಿ ಶಿವಯ್ಯ ಮುತ್ಯಾರ ಭವಿಷ್ಯ ಹುಟ್ಟು ಹಾಕಿದೆ.
ವರದಿ: ಗುರುರಾಜ್ ಗದ್ದನಕೇರಿ, ವಿಜಯಪುರ