ಓಲಾ, ಓಬರ್ ಆಟೊ ರೈಡ್ಗೆ ಶೇ 5 ತೆರಿಗೆ: ಸಾರಿಗೆ ಇಲಾಖೆ ನಿರ್ಧಾರದ ಬಗ್ಗೆ ಆಟೊ ಚಾಲಕರ ಅಸಮಾಧಾನ
ಬೆಂಗಳೂರು: ಪ್ರತಿ ಆಟೊರಿಕ್ಷಾ ರೈಡ್ಗೆ ಶೇ 5ರ ಜಿಎಸ್ಟಿ ವಿಧಿಸುವ ನಿರ್ಧಾರದ ಬಗ್ಗೆ 'ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಒಕ್ಕೂಟ' ಬೇಸರ ವ್ಯಕ್ತಪಡಿಸಿದೆ.
ಕರ್ನಾಟಕ ಸರ್ಕಾರವು ಆಯಪ್ಗಳ ಮೂಲಕ ಆಟೊಗಳನ್ನು ಬುಕ್ ಮಾಡಿ ಸಂಚರಿಸುವ ಪ್ರಯಾಣಿಕರ ಪ್ರತಿ ಸವಾರಿಗೆ ಶೇ. 5ರ ಸೇವಾ ಶುಲ್ಕ ಮತ್ತು ಜಿಎಸ್ಟಿ ವಿಧಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿತ್ತು. ಕಳೆದ ನವೆಂಬರ್ 25ರಂದು ಈ ಆದೇಶ ಹೊರಬಿದ್ದಿತ್ತು. ಇದು ಚಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷ, 'ಕರ್ನಾಟಕ ಸರ್ಕಾರವು ಹೈಕೋರ್ಟ್ ಎದುರು ಸರಿಯಾಗಿ ವಾದ ಮಂಡಿಸುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರವು 'ಕರ್ನಾಟಕ ಆನ್ ಡಿಮಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್' ನಿಯಮಗಳಿಗೆ ತಿದ್ದುಪಡಿ ತರಬೇಕಿತ್ತು. ಏಕೆಂದರೆ ಈ ನಿಯಮಗಳಲ್ಲಿ ಆಟೊರಿಕ್ಷಾಗಳ ಉಲ್ಲೇಖವೇ ಇಲ್ಲ' ಎಂದು ಪಾಷಾ ಪ್ರತಿಕ್ರಿಯಿಸಿದರು. 'ಅವರು ನ್ಯಾಯಾಲಯಕ್ಕೆ ಸರಿಯಾಗಿ ಮಾಹಿತಿ ನೀಡಿದ್ದರೆ, ನಿಯಮಗಳಿಗೆ ತಿದ್ದುಪಡಿ ತರಲು ನ್ಯಾಯಾಲಯವು ಸೂಚಿಸುತ್ತಿತ್ತು' ಎಂದು ಹೇಳಿದ್ದಾರೆ.