ವಿಜಯಪುರದಲ್ಲಿ ಮತ್ತೆ ರಕ್ತಪಾತ; ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ
ವಿಜಯಪುರ: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ ನಡೆದ ಘಟನೆ ನಡೆದಿದೆ. ಬರ್ಬರವಾಗಿ ನಡು ರಸ್ತೆಯಲ್ಲಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹುಡ್ಕೊ ಕಾಲೋನಿಯಲ್ಲಿ ಘಟನೆ ನಡೆದಿದೆ. 54 ವರ್ಷದ ಶಾಂತಾಬಾಯಿ ತಳವಾರ ಮೃತಪಟ್ಟಿರುವ ದುರ್ದೈವಿಯಾಗಿದ್ದಾಳೆ.ದುಷ್ಕರ್ಮಿಗಳು ಹರಿತವಾದ ಆಯುಧದಿಂದ ತಲೆಗೆ ಹೊಡೆದ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಅನುಮಾಸ್ಪದ ರೀತಿಯಲ್ಲಿ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.