ಉಡುಪಿಯಲ್ಲಿ ಶೀಘ್ರವೇ 'ಸಾಫ್ಟ್ವೇರ್ ಐಟಿ ಪಾರ್ಕ್ ನಿರ್ಮಿಸಿ' : ಪೇಜಾವರ ಶ್ರೀ ಕೇಂದ್ರ ಸರ್ಕಾರಕ್ಕೆ ಒತ್ತಾಯ

ಉಡುಪಿ : ಉಡುಪಿ(Udupi)ಯಲ್ಲೊಂದು ಸಾಫ್ಟ್ವೇರ್ ಐಟಿ ಪಾರ್ಕ್ (Software IT Park) ನಿರ್ಮಿಸಿ ಎಂದು ಉಡುಪಿಯ ಪೇಜಾವರ ಶ್ರೀ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕರಾವಳಿಯ ಕೌಟುಂಬಿಕ ಜೀವನ ಅಸ್ತವ್ಯಸ್ತಗೊಂಡಿದ್ದು, ಕರಾವಳಿಯ ಗ್ರಾಮಗಳು ವೃದ್ಧಾಶ್ರಮಗಳಂತಾಗಿದೆ. ಇದರಿಂದ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಆಸರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರ ಪ್ರತಿಭಾ ಪಲಾಯನದಿಂದ ಕರಾವಳಿಯ ಕೃಷಿ ಭೂಮಿಗಳು ಒಣಗಿ ಹೋಗಿದೆ . ಹೀಗಾಗಿ ಜಿಲ್ಲೆಯ ಆರ್ಥಿಕತೆ ಅಭಿವೃದ್ಧಿಗೆ ಸಾಫ್ಟ್ವೇರ್ ಪಾರ್ಕ್ ನಿರ್ಮಿಸುವುದು ಅತಿ ಅಗತ್ಯವಾಗಿದೆ ಉಡುಪಿಯಲ್ಲಿ ಸಾಫ್ಟ್ವೇರ್ ಐಟಿ ಪಾರ್ಕ್ ಸ್ಥಾಪನೆ ಮಾಡಲು 500 ಕೋಟಿ ಅನುದಾನ ಶೀಘ್ರವೇ ಒದಗಿಸುವಂ ತೆ ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ.
ಈಗಾಗಲೇ ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಎಂಟ್ರಪ್ರನರ್ಶಿಪ್ ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಪೇಜಾವರ ಶ್ರೀ ಪತ್ರ ಬರೆಯಲಾಗಿದೆ, ರಾಜ್ಯದಿಂದ ಪ್ರಸ್ತಾವನೆ ಬಂದ ತಕ್ಷಣ ಕಾರ್ಯಪ್ರವೃತ್ತ ಆಗುವುದಾಗಿ ರಾಜೀವ್ ಚಂದ್ರಶೇಖರ್ ಭರವಸೆ ನೀಡಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೂ ಈ ಕುರಿತು ಶ್ರೀಗಳು ಪತ್ರ ಬರೆದಿದ್ದಾರೆ. ಉಡುಪಿ ಜಿಲ್ಲಾಡಳಿತದಿಂದ ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಪೇಜಾವರ ಶ್ರೀ ಒತ್ತಾಯ ಮಾಡಿದ್ದಾರೆ.