ಬೆಂಗಳೂರಲ್ಲಿ ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ '2 ಐಟಂ ಮಿಸ್ಸಿಂಗ್‌' : 'ಡೆಲಿವರಿ ಬಾಯ್‌ಗೆ ಚಪ್ಪಲಿ'ಯಿಂದ ಥಳಿಸಿದ ದಂಪತಿ

ಬೆಂಗಳೂರಲ್ಲಿ ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ '2 ಐಟಂ ಮಿಸ್ಸಿಂಗ್‌' : 'ಡೆಲಿವರಿ ಬಾಯ್‌ಗೆ ಚಪ್ಪಲಿ'ಯಿಂದ ಥಳಿಸಿದ ದಂಪತಿ

ಬೆಂಗಳೂರು : ಎಲೆಕ್ಟ್ರಾನಿಕ್‌ ಸಿಟಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಫುಡ್‌ ಡೆಲಿವರಿ ಬಾಯ್‌ ಓರ್ವನಿಗೆ ಆರ್ಡರ್ ಮಾಡಿದ್ದರಲ್ಲಿ ಕೇವಲ 2 ವಸ್ತುಗಳನ್ನು ಮಿಸ್ ಆಗಿದೆ ಎಂದು ಸಿಟ್ಟಿಗೆದ್ದು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿ ದುರಂತ ಘಟನೆ ಬೆಳಕಿಗೆ ಬಂದಿದೆ.

ಎಲೆಕ್ಟ್ರಾನಿಕ್‌ ಸಿಟಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿಗಳು ಬ್ಲಿಂಕಿಟ್ ಆಯಪ್​ನಲ್ಲಿ ಮನೆಗೆ ಬೇಕಾದ ಗ್ರಾಸರಿಗಳನ್ನು ಆರ್ಡರ್ ಮಾಡಿದ್ರು, ಅದರಲ್ಲಿ ಎರಡು ವಸ್ತುಗಳ ಮಿಸ್‌ ಆಗಿತ್ತು. ಇದನ್ನು ಕಂಡು ಸಿಟ್ಟುಗೊಂಡ ದಂಪತಿಗಳು ಡೆಲಿವರಿ ಬಾಯ್​ಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಕೂಡಲೇ ಆಕ್ರೋಶಗೊಂಡ ನೂರಾರು ಡೆಲಿವರಿ ಬಾಯ್​ಗಳು ಎಲೆಕ್ಟ್ರಾನಿಕ್ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಮುಂದೆ ಪ್ರತಿಭಟನೆ.ಘಟನಾ ಸ್ಥಳಕ್ಕೆ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಪ್ಪಲಿಯಲ್ಲಿ ಹೊಡೆದ ದಂಪತಿಗಳಿಬ್ಬರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದಿದ್ದಾರೆ.