ಇಂದು ರಂಗೇರಿದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಕಾವು; ಕಾಂಗ್ರೆಸ್‌ ಗೆ ಮೇಯರ್‌ ಪಟ್ಟ?

ಇಂದು ರಂಗೇರಿದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಕಾವು; ಕಾಂಗ್ರೆಸ್‌ ಗೆ ಮೇಯರ್‌ ಪಟ್ಟ?

ಳ್ಳಾರಿ: ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇದೆ.ಹೀಗಾಗಿ ರಾಜಕೀಯ ನಾಯಕರ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಇನ್ನೊಂದು ಕಡೆ ಗಣಿನಾಡು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆ ಕಾವು ಕೂಡ ರಂಗೇರಿದೆ.

ಮಹಾನಗರ ಪಾಲಿಯ 39 ವಾರ್ಡ್‌ಗಳ ಪೈಕಿ 21 ಕಾಂಗ್ರೆಸ್, 13 ಬಿಜೆಪಿ, 05 ಜನ ಪಕ್ಷೇತರರು ಸದಸ್ಯರು ಗೆಲವು ಸಾಧಿಸಿದ್ದಾರೆ. ಕಳೆದ ವರ್ಷ 2022ರ ಮಾರ್ಚ್​​ನಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು, ಮೇಯರ್‌ ಆಗಿ 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್‌ಆಗಿ 37ನೇ ವಾರ್ಡ್‌ನ ಮಾಲನ್ ಬೀ ಆಯ್ಕೆಯಾಗಿದ್ದರು.ಇದಿಗ ಅವರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಇಂದು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ.

ಮೇಯರ್ ಸ್ಥಾನಕ್ಕೆ ಎಸ್​ಸಿ, ಉಪ ಮೇಯರ್ ಸ್ಥಾನಕ್ಕೆ ಎಸ್​ಟಿ ಮೀಸಲು ಘೋಷಣೆ ಮಾಡಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತ ಬಂದಿದ್ದು, ಇದರ ಜೊತೆಗೆ ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗ 26 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್‌ಗೆ ಮೇಯರ್ ಪಟ್ಟ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮುನ್ನವೇ ದೇಗುಲ ಮಾಹಾದ್ವಾರ ಉದ್ಘಾಟಿಸಿದ ಸಿ.ಸಿ ಪಾಟೀಲ್‌

ಗದಗ: ಕೇಂದ್ರ ಚುನಾವಣಾ ಆಯೋಗವು ಇಂದು ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಕೆಲವೇ ಕ್ಷಣಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಕಾರ್ಯಕ್ರಮಗಳೆಲ್ಲ ರದ್ದು ಮಾಡಿದ್ದಾರೆ. ಇನ್ನೇನಿ ಕೆಲವೇ ಕ್ಷಣಗಳಲ್ಲಿ ದಿನಾಂಕ ಘೋಷಣೆಯಾಗಲಿದೆ ಹೀಗಾಗಿ ಇದಕ್ಕೂ ಮುನ್ನವೇ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್‌ ಖಾಸಗಿ ವಾಹನದಲ್ಲಿ ಬಂದು ದೇವಾಲಯದ ಮಹಾದ್ವಾರದ ಉದ್ಘಾಟನೆ ನೆರವೇರಿಸಿದ್ದಾರೆ.ಗದಗ ನಗರದ ಚೇತನಾ ಕ್ಯಾಂಟೀನ್ ಸರ್ಕಲ್​​ನಲ್ಲಿರುವ ಶ್ರೀ ಕ್ಷೇತ್ರ ಕೈಲಾಸ ವರಸಿದ್ಧಿ‌ ಗಣಪತಿ ದೇವಸ್ಥಾನದ ಮಹಾದ್ವಾರವನ್ನ ಉದ್ಘಾಟಿಸಿದ್ದಾರೆ.