ಆಯ್ಕೆ ಸಮಿತಿಗೆ ಟಕ್ಕರ್: ರಣಜಿ ಟ್ರೋಫಿಯಲ್ಲಿ ಮತ್ತೊಂದು ಶತಕ ಸಿಡಿಸಿದ ಸರ್ಫರಾಜ್

ಆಯ್ಕೆ ಸಮಿತಿಗೆ ಟಕ್ಕರ್: ರಣಜಿ ಟ್ರೋಫಿಯಲ್ಲಿ ಮತ್ತೊಂದು ಶತಕ ಸಿಡಿಸಿದ ಸರ್ಫರಾಜ್

ಹೊಸದಿಲ್ಲಿ: ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಇತ್ತೀಚೆಗೆ ಪ್ರಕಟವಾದ ತಂಡದಲ್ಲಿ ಸ್ಥಾನ ಪಡೆಯದೆ ನಿರಾಸೆ ಅನುಭವಿಸಿದ್ದ ಸರ್ಫರಾಜ್ ಖಾನ್ ಅವರು ಇಂದು ಮತ್ತೊಂದು ಶತಕ ಬಾರಿಸಿದ್ದಾರೆ. ಇದರೊಂದಿಗೆ ಆಯ್ಕೆ ಸಮಿತಿಗೆ ಮತ್ತೆ ತನ್ನ ನೆನಪು ಮೂಡಿಸಿದ್ದಾರೆ.ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇತ್ತೀಚೆಗೆ ತಂಡ ಪ್ರಕಟಿಸಲಾಗಿತ್ತು. ಇದರಲ್ಲಿ ಸರ್ಫರಾಜ್ ಹೆಸರಿರಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇತ್ತಿಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ತೋರಿಸುತ್ತಿರುವ ಸರ್ಫರಾಜ್ ಖಾನ್ ಗೆ ಅವಕಾಶ ನೀಡದೆ ಇರುವುದು ಟೀಕೆಗೆ ಕಾರಣವಾಗಿದೆ. ಇದಾಗಿ ಕೆಲವೇ ದಿನಗಳಲ್ಲಿ ಸರ್ಫರಾಜ್ ಮತ್ತೊಂದು ಶತಕ ಹೊಡೆದಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅವರು ಶತಕ ಸಿಡಿಸಿದ್ದಾರೆ.