ಮಹೀಂದ್ರಾ ಎಕ್ಸ್‌ಯುವಿ400 ಇವಿ; ಜ.26ರಿಂದ ಅಧಿಕೃತ ಬುಕಿಂಗ್‌ ಆರಂಭ

ಮಹೀಂದ್ರಾ ಎಕ್ಸ್‌ಯುವಿ400 ಇವಿ; ಜ.26ರಿಂದ ಅಧಿಕೃತ ಬುಕಿಂಗ್‌ ಆರಂಭ

ಹೀಂದ್ರಾ ಕಂಪನಿಯು ಬಹುನಿರೀಕ್ಷಿತ ಎಕ್ಸ್‌ಯುವಿ 400 ಎಲೆಕ್ಟ್ರಿಕ್‌ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇಸಿ ಮತ್ತು ಇಎಲ್‌ ಎಂಬ ಎರಡು ಆವೃತ್ತಿಯಲ್ಲಿ ಎಕ್ಸ್‌ಯುವಿ 400 ಲಭ್ಯವಿರಲಿದ್ದು, ದರ 15.99 ಲಕ್ಷ ರೂ.ಗಳಿಂದ ಆರಂಭವಾಗಿ 18.99 ಲಕ್ಷ ರೂ.(ಎಕ್ಸ್‌ ಶೋರೂಂ)ವರೆಗೆ ಇರಲಿದೆ.

ಜ.26ರಿಂದ ಅಧಿಕೃತ ಬುಕಿಂಗ್‌ ಆರಂಭವಾಗಲಿದೆ. ಆಕ್ಟಿìಕ್‌ ಬ್ಲೂ, ಎವರೆಸ್ಟ್‌ ವೈಟ್‌ ಸೇರಿದಂತೆ 5 ಬಣ್ಣಗಳಲ್ಲಿ ಕಾರು ಲಭ್ಯವಿದೆ.

ಎಕ್ಸ್‌ಯುವಿ 400 ಇಸಿ ಆವೃತ್ತಿಯು ಒಂದು ಬಾರಿ ಚಾರ್ಜ್‌ ಮಾಡಿದರೆ (ಗಂಟೆಗೆ 34.5 ಕಿಲೋವ್ಯಾಟ್‌) ಸುಮಾರು 375 ಕಿ.ಮೀ. ಸಂಚರಿಸುತ್ತದೆ.

ಇಎಲ್‌ ಆವೃತ್ತಿಯು(39.4 ಕಿಲೋವ್ಯಾಟ್‌) ಸುಮಾರು 456 ಕಿ.ಮೀ.ವರೆಗೆ ಸಂಚರಿಸುತ್ತದೆ ಎಂದೂ ಕಂಪನಿ ಹೇಳಿದೆ.