9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ಅಭಿಯಾನ
ನವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಲಸಿಕೆ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಮೊದಲ ಹಂತದಲ್ಲಿ ಜೂನ್ ನಿಂದ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ರೂಪಿಸಿದ್ದು, 2026ರ ವೇಳೆಗೆ 16.02 ಕೋಟಿ ಲಸಿಕೆ ಡೋಸ್ ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಲಾಗುವುದು. ಗರ್ಭಕಂಠದ ಕ್ಯಾನ್ಸರ್ ಕಡೆಗೆ ಸೀರಂ ಇನ್ಸ್ಟಿಟ್ಯೂಟ್ ದೇಶಿಯವಾಗಿ ಸರ್ವ ವಾಕ್ ಲಸಿಕೆ ಅಭಿವೃದ್ಧಿಪಡಿಸಿದೆ.
ಪ್ರಸಕ್ತ ಮಾರುಕಟ್ಟೆಯಲ್ಲಿ ಅಮೆರಿಕ ಕಂಪನಿಯ ಗಾರ್ಡಸಿಲ್ ಲಸಿಕೆ ಲಭ್ಯವಿದ್ದು, ಸಿಂಗಲ್ ಡೋಸ್ ನ ಈ ಲಸಿಕೆಗೆ 10,850 ರೂ. ದರ ಇದೆ. ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆ ಎರಡು ಡೋಸ್ ನದ್ದಾಗಿದ್ದು, ಪ್ರತಿ ಡೋಸ್ ಗೆ 2 ಸಾವಿರ ರೂ. ದರ ಇದೆ. ಖಾಗಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.