7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ವೇತನ ಮತ್ತು ಭತ್ಯೆಗಳ ಪರಿಷ್ಕರಣೆ: ಇಂದು ಸಿಎಂ ಬೊಮ್ಮಾಯಿ ಘೋಷಣೆ?

ಬೆಂಗಳೂರು: 7ನೇ ವೇತನ ಆಯೋಗದಂತೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿ, ಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿಗೆ ಮುಷ್ಕರ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ.
ಈ ಕುರಿತಂತೆ ಇಂದು 2023-24ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡುವ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಮುದಾಯವನ್ನು ಸಮಾಧಾನ ಪಡಿಸೋ ಭರವಸೆ ನೀಡುವಂತ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಶೈಕ್ಷಣಿಕ ಮಟ್ಟದ ವಾರ್ಷಿಕ ಪರೀಕ್ಷೆಗಳು, ಚುನಾವಣೆ ಹೊತ್ತಿನಲ್ಲೇ ಸರ್ಕಾರಿ ನೌಕರರು ಮುಷ್ಕರ ನಿರತರಾದರೇ ಆಡಳಿಯ ಯಂತ್ರದ ಮೇಲೆ ಪರಿಣಾಮ ಬೀರೋ ಸೂಚನೆಯಿದೆ. ಈ ಕಾರಣಕ್ಕಾಗಿಯೇ ಸಿಎಂ ಬೊಮ್ಮಾಯಿಯವರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸರ್ಕಾರ ರಚಿಸಿರುವಂತ 7ನೇ ವೇತನ ಆಯೋಗದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಮಿತಿಯಿಂದ ಮಧ್ಯಂತರ ವರದಿಯನ್ನು ಪಡೆದು, ಜಾರಿಗೊಳಿಸೋ ನಿರ್ಧಾರವನ್ನು ಸದನದಲ್ಲೇ ಇಂದು ಘೋಷಣೆ ಮಾಡೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.