ಹೊಸ ವರ್ಷಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎರಡು ಪಟ್ಟು ಹೆಚ್ಚಳಿದೆ ಸ್ಯಾಲರಿ
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಮೊದಲು ಕೇಂದ್ರ ಸರ್ಕಾರಿ ನೌಕರರಿಗೆ ಫಿಟ್ಮೆಂಟ್ ಅಂಶದ ಉಡುಗೊರೆಯನ್ನು ಸರ್ಕಾರ ನೀಡಬಹುದು ಎನ್ನಲಾಗಿದೆ.
ಹೌದು, ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಅತಿದೊಡ್ಡ ಉಡುಗೊರೆಯನ್ನು ನೀಡಬಹುದು.
ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಈ ಹೆಚ್ಚಳವು ಜನವರಿ ಮತ್ತು ಜುಲೈನಲ್ಲಿ ಸಂಭವಿಸುತ್ತದೆ. ಪ್ರತಿ ವರ್ಷದಂತೆ, 2023 ರಲ್ಲಿ ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆಯೂ ಹೆಚ್ಚಾಗುತ್ತದೆ. ಜನವರಿ 2023 ರ ತುಟ್ಟಿಭತ್ಯೆಯನ್ನು ಮಾರ್ಚ್ ಗೆ ಮೊದಲು ಘೋಷಿಸಲಾಗುವುದು. ಇಲ್ಲಿಯವರೆಗೆ ಹಣದುಬ್ಬರದ ಅಂಕಿಅಂಶಗಳನ್ನು ನೋಡಿದರೆ, ಮುಂದಿನ ವರ್ಷವೂ ಶೇಕಡಾ 4 ರಷ್ಟು ಡಿಎ ಹೆಚ್ಚಳವಾಗಬಹುದು ಎನ್ನಲಾಗಿದೆ.