ಹೈದರಾಬಾದ್‌ನಲ್ಲಿ ಆಲಿಕಲ್ಲು ಮಳೆ; ಇಂಡಿಗೋ ವಿಮಾನಕ್ಕೆ ಹಾನಿ

ಹೈದರಾಬಾದ್‌ನಲ್ಲಿ ಆಲಿಕಲ್ಲು ಮಳೆ; ಇಂಡಿಗೋ ವಿಮಾನಕ್ಕೆ ಹಾನಿ

ಹೈದರಾಬಾದ್‌: ಹೈದರಾಬಾದ್‌ನಲ್ಲಿ ಮಾರ್ಚ್ 18ರಂದು ಆಲಿಕಲ್ಲು ಮಳೆಯಾಗಿದೆ. ಈ ವೇಳೆ, ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ಬಂದ ಇಂಡಿಗೋ ವಿಮಾನವು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿಯುವಾಗ ಆಲಿಕಲ್ಲು ಮಳೆಗೆ ಸಿಲುಕಿ ಸಣ್ಣ ಹಾನಿಯಾಗಿದೆ.

ಮಾರ್ಚ್ 18 (ಶನಿವಾರ)ರ ಸಂಜೆ ಸಂಭವಿಸಿದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಿಮಾನಕ್ಕೆ ಹಾನಿಯಾಗಿರುವ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆಲಿಕಲ್ಲು ಮಳೆಯಲ್ಲಿ ವಿಮಾನದ ರೇಡೋಮ್ ಮತ್ತು ವಿಂಡ್‌ಶೀಲ್ಡ್‌ಗಳು ಹಾನಿಗೊಳಗಾದವು. ಆದರೆ, ಅದು ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು. 6E 6594 ವಿಮಾನವು ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಶಂಶಾಬಾದ್‌ನ ವಿಮಾನ ನಿಲ್ದಾಣದ ಕಡೆಗೆ ಇಳಿಯುವಾಗ ಆಲಿಕಲ್ಲು ಮಳೆಗೆ ಅಪ್ಪಳಿಸಿತು.

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗಿದೆ. ವಿಮಾನದ ಹಾನಿಗೊಳಗಾದ ಭಾಗಗಳನ್ನು ನಂತರ ಬದಲಾಯಿಸಲಾಯಿತು