ಹೆಬ್ಬಾಳಕರಗೆ ಅವಮಾನ: ಕ್ಷಮೆ ಕೇಳುವಂತೆ ರಮೇಶ್ ಜಾರಕಿಹೊಳಿಗೆ ಆಗ್ರಹ

ಹೆಬ್ಬಾಳಕರಗೆ ಅವಮಾನ: ಕ್ಷಮೆ ಕೇಳುವಂತೆ ರಮೇಶ್ ಜಾರಕಿಹೊಳಿಗೆ ಆಗ್ರಹ

ಬೆಳಗಾವಿ: ತಾಲ್ಲೂಕಿನ ಸುಳೇಬಾವಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ 'ಸಮಾಜಕ್ಕೆ ಕೆಟ್ಟ ಹುಳ' ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ಪಾಟೀಲ ಒತ್ತಾಯಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವುದೇ ನಾಯಕರು ಕೀಳುಮಟ್ಟದ ಪದ ಬಳಸಿ ಇಂತಹ ಹೇಳಿಕೆ ಕೊಡಬಾರದು. ಇದು ನಿಮಗೆ ಶೋಭೆ ತರುವುದಿಲ್ಲ' ಎಂದರು.

'ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಸ್ಪರವಾಗಿ ಕೆಟ್ಟ ಶಬ್ದ ಬಳಸಿ ಆರೋಪ, ಪ್ರತ್ಯಾರೋಪ ಮಾಡಿರುವುದನ್ನು ಖಂಡಿಸುತ್ತೇವೆ' ಎಂದರು.

ಅಡಿವೇಶ ಇಟಗಿ, ರಾಮನಗೌಡ ಪಾಟೀಲ, ರಾಜು ಮಗದುಮ್ಮ ಇತರರಿದ್ದರು.