ಮೆಗಾ ಪ್ಲಾನ್ ಮಾಡಿಕೊಂಡು ಡಿಕೆಶಿ ಕ್ಷೇತ್ರ ಬದಲಾವಣೆ!? ಮದ್ದೂರಿನಿಂದ ಸ್ಪರ್ಧೆ ಮಾಡುವ ಚಿಂತನೆ ಹಿಂದಿದೆ ಮತ್ತೊಂದು ಗೇಮ್!

ಮಂಡ್ಯ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯ (Mandya)ದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಈ ಬಾರಿ ಕನಕಪುರ ಕ್ಷೇತ್ರ ಬಿಟ್ಟು ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣ ಕಣಕ್ಕಿಳಿಯಲು ಡಿಕೆಶಿ ಚಿಂತನೆ ನಡೆಸಿದ್ದು, ಇದರ ಹಿಂದೆ ಮೆಗಾ ಪ್ಲಾನ್ ಇದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.
ಡಿಕೆಶಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಮಾಡಿದ್ರಾ? ಮದ್ದೂರು ಕ್ಷೇತ್ರ ಆಯ್ಕೆ ಹಿಂದಿದೆಯಾ ರೆಬೆಲ್ ಲೇಡಿಗೆ ಟಕ್ಕರ್ ಕೊಡುವ ತಂತ್ರ? ಎಂಬ ಪ್ರಶ್ನೆ ಮೂಡಿದೆ. ಕನಕಪುರ ಕ್ಷೇತ್ರದಿಂದ ಕುಟುಂಬಸ್ಥರಿಗೆ ರಾಜಕೀಯ ನೆಲೆ ತಂದುಕೊಡುವ ಪ್ರಯತ್ನ ಒಂದು ಕಡೆಯಾದರೆ, ಮತ್ತೊಂದು ಕಡೆ ತನ್ನ ವಿರುದ್ಧ ತಿರುಗಿ ಬಿದ್ದಿರುವ ಸಂಸದೆ ಸುಮಲತಾ (Sumalatha Ambareesh)ಗೆ ಟಕ್ಕರ್ ಕೊಡಲು ಡಿಕೆಶಿ (DKS) ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಮಲತಾ ಅವರು ರಾಜ್ಯ ರಾಜಕೀಯಕ್ಕೆ ಎಂಟ್ರಿಯಾದರೆ ಮದ್ದೂರು ಅಥವಾ ಮಂಡ್ಯ ಕ್ಷೇತ್ರದ ಆಯ್ಕೆ ಬಹುತೇಕ ಫಿಕ್ಸ್. ಅದರಲ್ಲೂ ಅಂಬರೀಶ್ ತವರು ಕ್ಷೇತ್ರ ಮದ್ದೂರಿನಿಂದ ಸ್ಪರ್ಧೆ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮದ್ದೂರಲ್ಲಿ ತಾನೇ ಸ್ಪರ್ಧಿಸಿ ಸುಮಲತಾ ಓಟಕ್ಕೆ ಬ್ರೇಕ್ ಹಾಕಬಹುದು ಎಂಬ ಲೆಕ್ಕಾಚಾರವನ್ನು ಡಿಕೆಶಿ ಇಟ್ಟುಕೊಂಡಿದ್ದಾರಂತೆ. ಒಂದು ವೇಳೆ ಮಂಡ್ಯದಿಂದ ಸಂಸದೆ ಸುಮಲತಾ ಸ್ಪರ್ಧೆ ಮಾಡಿದ್ರೆ, ಚೆಲುವರಾಯಸ್ವಾಮಿ ಅವರನ್ನು ಕಣಕ್ಕಿಳಿಸಿ ಅವರನ್ನು ಕಟ್ಟಿಹಾಕುವ ಪ್ಲಾನ್ ಮಾಡಿದ್ದಾರಂತೆ.
ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿಯಾಗದಂತೆ ನೋಡಿಕೊಳ್ಳಲು ಡಿಕೆಶಿ ಚಕ್ರವ್ಯೂಹ ಎಣೆದಿದ್ದು, ಒಂದು ವೇಳೆ ಎಂಟ್ರಿಯಾದರು ಎಂಎಲ್‌ಎ ಚುನಾವಣೆಯಲ್ಲಿ ಸೊಲೀಸಬೇಕೆಂಬ ರಣತಂತ್ರ ರೂಪಿಸಿದ್ದಾರಂತೆ. ಈ ಮೂಲಕ ತನ್ನ ಮೇಲೆ ತಿರುಗಿಬಿದ್ದ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ಳಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತಿಚೆಗಷ್ಟೇ ಸುಮಲತಾ ಅವರು ಡಿಕೆಶಿ ವಿರುದ್ಧ ತಿರುಗಿ ಬಿದ್ದಿದ್ದರು. ನಾನು ಕಾಂಗ್ರೆಸ್ಗೆ ಬರಲು ಡಿಕೆಶಿಗೆ ಇಷ್ಟವಿಲ್ಲ ಅನ್ಸುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯು ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಆಗಲು ನಿಮಗೆ ಟಿಕೆಟ್ ಕೊಡೋಕೆ ಆಗಲ್ಲ, ನೀವು ಮಂಡ್ಯದಲ್ಲಿ ನಿಂತರೆ ಸೋಲ್ತೀವಿ ಅಂತಾ ಹೇಳಿದ್ದರು. ಈಗ ರಾಜಕೀಯದಲ್ಲಿ ಏನೂ ಹೇಳಲು ಆಗಲ್ಲ. ಮುಂದೆ ರಾಜ್ಯ ರಾಜಕಾರಣಕ್ಕೆ ಬರಲೇಬೇಕು ಎಂಬ ಸಂದರ್ಭ ಬಂದರೆ, ನೋಡೋಣ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯ ರಾಜಕಾರಣಕ್ಕೆ ಬರುವ ಮುನ್ಸೂಚನೆಯನ್ನು ಸುಮಲತಾ ಕೊಟ್ಟಿದ್ದಾರೆ. ಇದೀಗ ಸಂಸದೆ ಸುಮಲತಾರ ರಾಜ್ಯ ರಾಜಕಾರಣಕ್ಕೆ ಡಿಕೆಶಿಯೆ ಅಡ್ಡಗಾಲಾದ್ರಾ ಎಂಬ ಪ್ರಶ್ನೆ ಮೂಡುವಂತಿದೆ. (ದಿಗ್ವಿಜಯ ನ್ಯೂಸ್)