ಹೂಳು, ಬಳಕೆಯ ಹೆಚ್ಚಳದಿಂದ ಭಾರತಕ್ಕೆ ಕುಡಿಯುವ ನೀರಿನ ಹಾಹಾಕಾರ ಸಂಭವ: ವಿಶ್ವಸಂಸ್ಥೆಯ ಗಂಭೀರ ಮುನ್ನೆಚ್ಚರಿಕೆ
ಬೆಂಗಳೂರು, ಮಾರ್ಚ್ 23: ದಿನೇ ದಿನೆ ಬದಲಾಗುತ್ತಿರುವ ಹವಾಮಾನದಲ್ಲಿ ಹಲವು ನೈಸರ್ಗಿಕ ಬದಲಾವಣೆ ಮತ್ತು ದೂರಾಲೋಚನೆ ಇಲ್ಲದ ಮನುಷ್ಯನ ನಡೆ, ನಿರ್ಧಾರಗಳಿಂದಾಗಿ ಭಾರತಕ್ಕೆ ನೀರಿನ ಸಂಚಕಾರವೊಂದು ಎದುರಾಗಲಿದೆ.
ಹೌದು, ಸದ್ಯ ಪರಿಸ್ಥಿಯಲ್ಲಿನ ಅಧ್ಯಯನ ಆಧರಿಸಿ ನೋಡುವುದಾದರೆ ಭಾರತೀಯರೆಲ್ಲೂ ಭವಿಷ್ಯದಲ್ಲಿ ನೀರಿನ ಹಾಹಾಕಾರ ಎದುರಿಸಬೇಕಿದೆ.
ವಿಶ್ವಸಂಸ್ಥೆಯ ಹೇಳುವ ಪ್ರಕಾರ, ಭಾರತ ದೇಶದಲ್ಲಿ ಮುಂದಿನ 27 ವರ್ಷದ ಬಳಿಕ ಅಂದರೆ 2050ರ ಹೊತ್ತಿಗೆ ಭಾರಿ ನೀರಿನ ಅಭಾವ ಎದುರಾಗುವ ಸಂಭವವಿದೆ ಎಂದು ಭವಿಷ್ಯ ನುಡಿದಿದೆ. ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಾಗತಿಕ ನಗರಗಳ ಜನಸಂಖ್ಯೆಯು 2016ರಲ್ಲಿ 933 ಮಿಲಿಯನ್ ಇತ್ತು. ಅದು ಮುಂದಿನ 2050ರಲ್ಲಿ 1.7 ರಿಂದ 2.4 ಬಿಲಿಯನ್ (ಶತಕೋಟಿ) ಗೆ ಹೆಚ್ಚಾಗಲಿದೆ ಎಂಬ ಕಳವಳಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.
ವಿಶ್ವಸಂಸ್ಥೆಯು ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಕುರಿತಂತೆ ವಿಶ್ವಸಂಸ್ಥೆ, ಜಗತ್ತಿನಾದ್ಯಂತ ಹಾಲಿ ಒಟ್ಟು ಜನಸಂಖ್ಯೆಯ ಶೇಕಡಾ 26 ಪ್ರತಿಶತದಷ್ಟು ಜನರಿಗೆ ಶುದ್ಧ ಕುಡಿಯುವ ನೀರೇ ಸಿಗುತ್ತಿಲ್ಲ. ಅಲ್ಲದೇ ವಿಶ್ವದಲ್ಲಿ ಶೇಕಡಾ 46 ಪ್ರತಿಶತದಷ್ಟು ಜನರು ನೈರ್ಮಲ್ಯದ ಸಮಸ್ಯೆಗೆ ಉತ್ತಾಗಿದ್ದಾರೆ ಎಂಬ ಸತ್ಯವನ್ನು ವಿಶ್ವಸಂಸ್ಥೆಯ ಅಂಕಿ ಅಂಶಯಗಳು ಬಯಲು ಮಾಡಿವೆ.
ಈ ಹಿಂದಿನ ನಾಲ್ಕು ದಶಕಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿ ವರ್ಷಕ್ಕೆ ಸರಿಸುಮಾರು 1 ಪ್ರತಿಶತದಷ್ಟು ಹೆಚ್ಚುತ್ತಿದೆ. ಅಂದರೆ ಪ್ರತಿ ವರ್ಷವು ನೀರು ಬಳಕೆ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ. ಇದು ಹೀಗೆ 2050ರ ಹೊತ್ತಿಗೆ ಇದೇ ದರದಲ್ಲಿ ಹೆಚ್ಚುವ ಸಾಧ್ಯತೆ ಇದೆ.
ಇನ್ನು ಮುಂದಿನ 27 ವರ್ಷಗಳ ನಂತರ (2050ರ ಹೊತ್ತಿಗೆ) ಭಾರತದಲ್ಲಿನ ಸುಮಾರು 3,700 ಅಣೆಕಟ್ಟುಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇಕಡಾ .26ರಷ್ಟ ಕಳೆದುಕೊಳ್ಳಲಿವೆ. ಕ್ರಮೇಣ ಈ ಆಣೆಕಟ್ಟುಗಳಲ್ಲಿ ನೀರಿನ ಇರುವಿಕೆ ಕಡಿಮೆಯಾಗುತ್ತದೆ. ಅಲ್ಲದೇ ಆಣೆಕಟ್ಟು, ಕೆರೆ ಕಟ್ಟೆಗಳಲ್ಲಿ ಹೂಳು ಹೆಚ್ಚಾಗಿ ತುಂಬಿಕೊಳ್ಳುತ್ತಿದೆ. ಇದು ಭವಿಷ್ಯಕ್ಕೆ ಮಾರಕವಾಗಲಿದೆ. ಇದರಿಂದಾಗಿ ನೀರಿನ ಕೊರತೆಯ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ನೀರು ಸಂಗ್ರಹಣಾ ಸಾಮರ್ಥ್ಯದಲ್ಲಿ ಭಾರಿ ಕುಸಿತ
ಈಗಾಗಲೇ ಹೂಳು ಸಮಸ್ಯೆಗಳಿಂದಾಗಿ ವಿಶ್ವದ ಸುಮಾರು 50ಸಾವಿರ ಅಣೆಕಟ್ಟುಗಳು ಮೊದಲಿನಷ್ಟು ನೀರು ಸಂಗ್ರಹಣೆ ಮಾಡಿಕೊಳ್ಳುತ್ತಿಲ್ಲ. ಅವುಗಳು ತಮ್ಮ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.13ರಿಂದ ಶೇ.19ರಷ್ಟು ಕಳೆದುಕೊಂಡಿವೆ.
ಜಾಗತಿಕ ನೀರಿನ ಬಿಕ್ಕಟ್ಟು ನಿಯಂತ್ರಣದಿಂದ ಹೊರಗುಳಿಯುವುದನ್ನು ತಡೆಯಲು ಬಲವಾದ ಅಂತಾರಾಷ್ಟ್ರೀಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನೀರಿನ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.
ಜಗತ್ತಿನ ವಿವಿಧೆಡೆ ಇರುವ ಅಣೆಕಟ್ಟುಗಳು ಶತಕೋಟಿ ಘನ ಮೀಟರ್ಗೆ ಕುಸಿಯಲಿವೆ. 2050ರ ವೇಳೆಗೆ ಶೇ.26ರಷ್ಟು ನೀರಿನ ಸಂಗ್ರಹವನ್ನು ನಾವೆಲ್ಲರು ಕಳೆದುಕೊಳ್ಳಲಿದ್ದೇವೆ. 1650 ಶತಕೋಟಿ ಘನ ಮೀಟರ್ ಶೇಖರಣಾ ಸಾಮರ್ಥ್ಯದ ನಷ್ಟವು ಭಾರತ, ಚೀನಾ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಕೆನಡಾದ ವಾರ್ಷಿಕ ನೀರಿನ ಬಳಕೆಗೆ ಸರಿಸಮನಾಗಿರುತ್ತದೆ ಎಂದು ಊಹಿಸಲಾಗಿದೆ. ಜಾಗತಿಕ ಜನಸಂಖ್ಯೆಯ ಶೇಕಡಾ 10ರಷ್ಟು ಜನಸಂಖ್ಯೆ ನೀರಿನ ಕೊರತೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿಶತದಷ್ಟು ಜನರು ನೀರಿನ ಕೊರತೆ ಇರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಶಕದಲ್ಲಿ ಭೂಮಿಯು ತಾಪಮಾನವನ್ನು ಹೆಚ್ಚು ಕಾಣುತ್ತಿದೆ. ಜಾಗತಿಕವಾಗಿ ಶೇ.80ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸದೆ ಪರಿಸರಕ್ಕೆ ನೇರವಾಗಿ ಬಿಡಲಾಗುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೇ ಈ ಪ್ರಮಾಣ ಅಧಿಕ (ಶೇಕಡಾ 99ರಷ್ಟಿದೆ) ಎಂಬಂತಾಗಿದೆ. 2030ರ ವೇಳೆಗೆ ಮುಂದಿನ ಏಳು ವರ್ಷ ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಸ್ಯೆ ಸರಿದೂಗಿಸಲು ವಾರ್ಷಿಕವಾಗಿ ಅಂದಾಜು ವೆಚ್ಚ 600 ಶತಕೋಟಿ ಡಾಲರ್ನಿಂದ 1 ಟ್ರಿಲಿಯನ್ ಡಾಲರ್ವರೆಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.