ಕಲಬುರಗಿ ಮಹಾನಗರ ಪಾಲಿಕೆ BJP ತೆಕ್ಕೆಗೆ: ಮೇಯರ್ ಆಗಿ ವಿಶಾಲ್ ದರ್ಗಿ, ಉಪಮೇಯರ್ ಆಗಿ ಶಿವಾನಂದ ಆಯ್ಕೆ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆ ನೂತನ ಮೇಯರ್ ಅಗಿ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.
ಚುನಾವಣೆಗೆ ಹಾಜರಾದ 65 ಸದಸ್ಯರಲ್ಲಿ 33 ಮತ ಬಿಜೆಪಿ ಪಾಲಾಗಿದ್ದು, ಇದೇ ಮೊದಲ ಬಾರಿಗೆ ಯಾರ ಬೆಂಬಲವೂ ಇಲ್ಲದೆ, ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಪಡೆದಿದೆ.