ಹುಬ್ಬಳ್ಳಿ ಕಿಮ್ಸ್ ನಲ್ಲಿ ಸೆಕ್ಯುರಿಟಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ
ರೋಗಿಗಳಿಗೆ ಮಾತ್ರೆ ನೀಡಲು ರೋಗಿಯ ಸಂಬಂಧಿಯೊಬ್ಬರು ಹುಬ್ಬಳ್ಳಿಯ ಕಿಮ್ಸ್ ಒಳಗಡೆ ಹೋಗುತ್ತಿದ್ದಾಗ ಸೆಕ್ಯುರಿಟಿ ಗಾರ್ಡ್ ಅವರನ್ನು ತಡೆದಿದ್ದಾರೆ. ಮಾತ್ರೆ ನೀಡಲು ಹೋಗುತ್ತಿರವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಸಹ ಸೆಕ್ಯುರಿಟಿ ಗಾರ್ಡ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ಕಾರಣದಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸೆಕ್ಯುರಿಟಿ ಗಾರ್ಡ ಮೇಲೆ ಆಕ್ರೋಶಗೊಂಡ ಸಾರ್ವಜನಿಕರು ಸೆಕ್ಯುರಿಟಿ ಗಾರ್ಡ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇದು ಕಿಮ್ಸ್ ನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದಿದೆ ಇನ್ನು ಸಂಬಂಧಿಸಿದ ಅಧಿಕಾರಿಗಳು ಸೆಕ್ಯುರಿಟಿ ಗಾರ್ಡ್ ಕಿರಿಕಿರಿ ತಪ್ಪಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.