ಹಿಂದಿ ಸಿನಿಮಾ ಆಫರ್‌ ತಿರಸ್ಕರಿಸಿ ಕನ್ನಡ ಪ್ರೇಮ ಮೆರೆದ ಝೈದ್‌ ಖಾನ್‌

ಹಿಂದಿ ಸಿನಿಮಾ ಆಫರ್‌ ತಿರಸ್ಕರಿಸಿ ಕನ್ನಡ ಪ್ರೇಮ ಮೆರೆದ ಝೈದ್‌ ಖಾನ್‌

ಬನಾರಸ್‌ ಸಿನಿಮಾದ ಹೀರೋ ಝೈದ್‌ ಖಾನ್‌ ಅವರಿಗೆ ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದೊಳ್ಳೆ ಕಥೆ ಹಿಡಿದು ಝೈದ್‌ ಅವರನ್ನು ಸಂಪರ್ಕಿಸಿದ್ದಾರೆ. ಈ ಅವಕಾಶವನ್ನು ಝೈದ್‌ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೆ, ಝೈದ್‌ ಅವರು ಈ ಆಫರ್‌ ಅನ್ನು ನಿರಾಕರಿಸಿದ್ದಾರೆ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ದನಿಲ್ಲ ಎಂಬ ಉತ್ತರ ನೀಡಿದ್ದು, ಕನ್ನಡ ಪ್ರೇಮ ಮೆರೆದಿದ್ದಾರೆ.